ನವದೆಹಲಿ,ಮೇ.30-ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಸಂಸದ ಶಶಿ ತರೂರ್ ಅವರ ಮಾಜಿ ಆಪ್ತ ಸಹಾಯಕ (ಸಿಬ್ಬಂದಿ)ನನ್ನು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬಂಧಿತನಿಂದ 35.22 ಲಕ್ಷ ಮೌಲ್ಯದ 500 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯಾಂಕಾಕ್‌ನಿಂದ ಇಲ್ಲಿಗೆ ಆಗಮಿಸಿದ ಶಶಿ ತರೂರ್ ಅವರ ಆಪ್ತ ಸಹಾಯಕ ಹಾಗೂ ಮತ್ತೊಬ್ಬ ಸೇರಿ ಇಬ್ಬರನ್ನು ಅಧಿಕಾರಿಗಳು ಬಂಧಿಸಿ ಅವರ ವಿರುದ್ದ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಹಿಮಾಚಲ ಪ್ರದೇಶದಲ್ಲಿರುವ ಶಶಿ ತರೂರ್ ಅವರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಶಿ ತರೂರ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ ನಾನು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿದ್ದೇನೆ. ನನ್ನ ಸಿಬ್ಬಂದಿಯ ಬಂಧನದ ಕುರಿತು ಕೇಳಿ ಆಘಾತಕ್ಕೊಳಗಾಗಿದ್ದೇನೆ. 72 ವರ್ಷ ವಯಸ್ಸಿನ ಅವರು ನಿವೃತ್ತಿ ಹೊಂದಿದ್ದು, ಡಯಾಲಿಸಿಸ್ನಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಸಹಾನುಭೂತಿಯ ಆಧಾರದಡಿ ಅರೆಕಾಲಿಕ ಸಹಾಯಕನನ್ನಾಗಿ ಉಳಿಸಿಕೊಳ್ಳಲಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ನಾನು ಕ್ಷಮಿಸುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಘಟನೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಮತ್ತು ಸಿಪಿಎಂ “ಚಿನ್ನ ಕಳ್ಳಸಾಗಣೆದಾರರ ಮೈತ್ರಿ” ಎಂದು ಟೀಕಿಸಿದ್ದಾರೆ. ಈ ಮೊದಲು ಚಿನ್ನ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಕಾರ್ಯದರ್ಶಿ ಭಾಗಿಯಾದ್ದರು. ಇದೀಗ ಕಾಂಗ್ರೆಸ್ ಸಂಸದನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ಸಿಪಿಎಂ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಮತ್ತು ಕಾಂಗ್ರೆಸ್ ಎರಡೂ ಇಂಡಿಯಾ ಮೈತ್ರಿ ಕೂಟದ ಭಾಗವಾಗಿವೆ. ಇದು ಚಿನ್ನ ಕಳ್ಳಸಾಗಣೆದಾರರ ಮೈತ್ರಿ ಎಂದು ಲೇವಡಿ ಮಾಡಿದ್ದಾರೆ.
Previous Articleಬೆಂಗಳೂರಲ್ಲಿ ಸಿಕ್ಕಿ ಬಿದ್ದರು ಬಾಂಗ್ಲಾ ಪ್ರಜೆಗಳು.
Next Article ಸಚಿವ ನಾಗೇಂದ್ರ ರಾಜೀನಾಮೆಗೆ ಜೂನ್ 6ರ ಗಡುವು.
4 ಪ್ರತಿಕ್ರಿಯೆಗಳು
Зеркало для быстрого доступа — 888starz зеркало всегда доступно.
Зеркало сайта всегда работает, позволяя обходить блокировки и играть без преград http://www.detskiy-mir.net/user/makksimnoviikwv/
Используйте зеркало https://888starz.today для постоянного доступа к сайту и не пропустите важные события.
https://balloonhq.ru/news/5/12859/