ವಿಶ್ವಸಂಸ್ಥೆ: ಉಕ್ರೇನ್-ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ 2022ನೇ ಸಾಲಿನಲ್ಲಿ ಭಾರತ ಶೇ.6.4ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವಸಂಸ್ಥೆಯ ಆರ್ಥಿಕ ಹಾಗು ಸಾಮಾಜಿಕ ವ್ಯವಹಾರಗಳ ಇಲಾಖೆ ‘ವಿಶ್ವ ಆರ್ಥಿಕ ಪರಿಸ್ಥಿತಿ ಹಾಗು ಮುನ್ನೋಟ’ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಜಗತ್ತು 2022ರಲ್ಲಿ ಕೇವಲ ಶೇ.3.1ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದೂ ವಿಶ್ವಸಂಸ್ಥೆ ತಿಳಿಸಿದೆ. ಭಾರತವು ಈ ಮುನ್ನ ಶೇ.8.8ರ ಬೆಳವಣಿಗೆ ದರ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಪ್ರಗತಿ ದರದ ಅಂದಾಜು ಶೇ.6.4ಕ್ಕೆ ಇಳಿದರೂ ಇಷ್ಟುವೇಗದ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಏಕೈಕ ದೇಶವಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಈ ನಡುವೆ 2023ನೇ ಸಾಲಿನಲ್ಲಿ ಭಾರತ ಶೇ.6ರ ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ವರದಿ ಹೇಳಿದೆ.
ಆರ್ಥಿಕ ಪ್ರಗತಿಯಲ್ಲಿ ವಿಶ್ವದಲ್ಲೇ ಭಾರತ ನಂಬರ್ 1 ಎಂದ ವಿಶ್ವಸಂಸ್ಥೆ
Previous Articleಡೀಸೆಲ್ ಟ್ಯಾಂಕರ್, ಟ್ರಕ್ ಡಿಕ್ಕಿ: ಸ್ಥಳದಲ್ಲೇ 9 ಮಂದಿ ಸಜೀವ ದಹನ
Next Article ನವಜೋತ್ ಸಿಂಗ್ ಸಿಧು ಪಟಿಯಾಲ ಕೋರ್ಟ್‌ಗೆ ಶರಣು