ಮೆಲ್ಬೋರ್ನ್.
ಇದು ಸಾಮಾಜಿಕ ಜಾಲತಾಣಗಳ ಯುಗ. ಯಾವುದೇ ಮಾಹಿತಿ ಮನರಂಜನೆ ಅಷ್ಟೇ ಅಲ್ಲ ನಮಗೆ ಬೇಕಾದ ವಸ್ತುಗಳು ಜಾಲತಾಣಗಳ ಮೂಲಕ ನಮ್ಮ ಅಂಗೈಯಲ್ಲಿ ಕ್ಷಣಮಾತ್ರದಲ್ಲಿ ಲಭಿಸುತ್ತದೆ.
ಆಧುನಿಕ ಯುಗದಲ್ಲಿ ಈ ತಂತ್ರಜ್ಞಾನದಿಂದ ಸಾಕಷ್ಟು ಉಪಯೋಗವಾಗಿದ್ದರೂ, ಅಷ್ಟೇ ಪ್ರಮಾಣದಲ್ಲಿ ದುಷ್ಪರಿಣಾಮಗಳು ಇವೆ. ಅದರಲ್ಲೂ ಮಕ್ಕಳ ಮೇಲೆ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಆದ್ಯಯನ ವರದಿಗಳು ತಿಳಿಸುತ್ತವೆ. ಶೈಕ್ಷಣಿಕ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳು ಕ್ಷಣ ಮಾತ್ರದಲ್ಲಿ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಇದರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ಎಂದು ಈ ವರದಿಗಳು ಎಚ್ಚರಿಸಿವೆ.
ಹೀಗಾಗಿ ಸಾಮಾಜಿಕ ಮಾಧ್ಯಮ ಬಳಕೆಯ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು ಅಷ್ಟೇ ಅಲ್ಲ ಇದರ ಮೇಲೆ ನಿಯಂತ್ರಣ ಕೂಡ ಇರಬೇಕು ಎನ್ನುವ ಆಗ್ರಹಗಳು ಸರ್ಕಾರಗಳ ಮೇಲೆ ಹೇರಲಾಗುತ್ತಿದೆ .ಆದರೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಇವುಗಳ ನಿಯಂತ್ರಣದ ಬಗ್ಗೆ ಸ್ಪಷ್ಟ ಮಾರ್ಗ ಸೂಚಿ ರಚಿಸಿಲ್ಲ .
ಈ ನಿಟ್ಟಿನಲ್ಲಿ ಇದೀಗ ಆಸ್ಟ್ರೇಲಿಯಾ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಸಾಮಾಜಿಕ ಮಾಧ್ಯಮ ಮಕ್ಕಳಿಗೆ ಹಾನಿ ಉಂಟುಮಾಡುತ್ತಿರುವ ಕಾರಣ ಅವುಗಳನ್ನು ಬಳಸಲು 16 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಹಾಗೂ ಈ ನಿಯಮ ಪಾಲನೆಗೆ ಸಾಮಾಜಿಕ ಜಾಲತಾಣಗಳನ್ನೇ ಹೊಣೆಯಾಗಿಸಲಾಗುವುದು’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್ ಹೇಳಿದ್ದಾರೆ
ಕುರಿತ ಮಸೂದೆಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಮೈಕೆಲ್ ರೊನಾಲ್ಡ್ ಅವರು ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ಸಾಮಾಜಿಕ ಜಾಲತಾಣ ಸಂಸ್ಥೆಗಳ ವಿರುದ್ಧ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸುವ ಎಚ್ಚರಿಕೆ ನೀಡಿರುವ ಮಸೂದೆ ಕಾನೂನು ಕ್ರಮದ ಕಲಂ ಗಳನ್ನು ಉಲ್ಲೇಖಿಸಿದೆ
ಈ ಮಸೂದೆ ಅಂಗೀಕಾರವಾದ 1 ವರ್ಷದ ನಂತರ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಎಕ್ಸ್, ಟಿಕ್‌ಟಾಕ್, ಇನ್ಸ್‌ಟಾಗ್ರಾಂ, ಫೇಸ್‌ಬುಕ್‌ಗಳು 16 ವರ್ಷಕ್ಕಿಂತ ಸಣ್ಣ ಮಕ್ಕಳನ್ನು ಜಾಲತಾಣ ಬಳಕೆಯಿಂದ ಹೊರಗಿಡುವ ವಿಧಾನದ ಕುರಿತು ಚಿಂತಿಸಬೇಕು’ ಎಂದು ಸೂಚಿಸಲಾಗಿದೆ.
ಆದರೆ ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಯಾವುದೇ ನಿಯಂತ್ರಣಗಳನ್ನು ಈ ಮಸೂದೆ ಒಳಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Previous Articleಕ್ಷಮೆ ಯಾಚಿಸಿದ ಪ್ರಹ್ಲಾದ್ ಜೋಶಿ.
Next Article ಹೇರ್ ಡ್ರೈಯರ್ ಸ್ಪೋಟದ ಹಿಂದಿನ ಅಸಲಿ ಕಹಾನಿ.