ಬೆಂಗಳೂರು,ಮಾ.21:
ಸಹಕಾರ ಸಚಿವ ಕೆಎನ್ ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಅವರು ತಮ್ಮನ್ನು ಹನಿ ಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂದು ಮಾಡಿರುವ ಆರೋಪ ಕೋಲಾಹಲ ಸೃಪ್ಪಿಸಿರುವ ಬೆನ್ನಲ್ಲೇ, ಇನ್ನೂ ಮೂವರು ಮಂತ್ರಿಗಳು ಮತ್ತು ಎಐಸಿಸಿ ನಾಯಕರೊಬ್ಬರನ್ನು ಈ ಜಾಲದಲ್ಲಿ ಸಿಲುಕಿಸಲು ಯತ್ನಿಸಿದ ಅಂಶ ಪತ್ತೆಯಾಗಿದೆ.
ಮುಂಬೈ ಕರ್ನಾಟಕ ಪ್ರದೇಶಕ್ಕೆ ಸೇರಿದ ಓರ್ವ ಪ್ರಭಾವಿ ಮಂತ್ರಿ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಓರ್ವ ಮಂತ್ರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ್ತೋರ್ವ ಮಂತ್ರಿಯನ್ನು ಈ ಜಾಲದಲ್ಲಿ ಸಿಲುಕಿಸಲು ಯತ್ನಿಸಲಾಗಿದೆ ಎಂಬ ವರದಿಗಳು ಹರಿದಾಡಿವೆ.
ಇದರ ನಡುವೆ ಎಐಸಿಸಿ ನಾಯಕರೊಬ್ಬರು ಕೂಡ ಈ ಜಾಲದಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ ಮತ್ತೊಂದೆಡೆ ಮಂತ್ರಿ ರಾಜಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವ 48 ಜನರ ಪೈಕಿ ತಾವು ಕೂಡ ಒಬ್ಬರಾಗಿರಬಹುದು ಎಂದು ಹೇಳುವ ಮೂಲಕ ಸಮಾಜ ಕಲ್ಯಾಣ ಮಂತ್ರಿ ಹೆಚ್ ಸಿ ಮಹಾದೇವಪ್ಪ ಅಚ್ಚರಿ ಮೂಡಿಸಿದ್ದಾರೆ.
ಹನಿ ಟ್ರ್ಯಾಪ್ ತಂಡ ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಮಂತ್ರಿಯನ್ನು ಕೆಡವಲು ನೋಡಿದೆ. ತಂಡದ ವ್ಯಕ್ತಿಗಳ ಬಗ್ಗೆ ಅನುಮಾನ ಗೊಂಡ ಆ ಮಂತ್ರಿಗಳು ಅವರನ್ನು ಹಿಡಿದು ಧರ್ಮದೇಟು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ ಈ ತಂಡಕ್ಕೆ ಯಾರು ಸೂತ್ರದಾರರು ಎಂಬ ಮಾಹಿತಿಯನ್ನು ತಿಳಿಸಿರುವ ಆ ಸದಸ್ಯರು ಯಾರು ಯಾರನ್ನು ಬಲೆಯಲ್ಲಿ ಬೀಳಿಸುವ ಪ್ರಯತ್ನ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.
ಈ ತಂಡದಿಂದ ಮಾಹಿತಿಯನ್ನು ಕಲೆ ಹಾಕಿದ ನಂತರ ಆ ಮಂತ್ರಿಗಳು ಇನ್ನೂ ಯಾರು ಯಾರನ್ನು ಬಲಗೆ ಕೆಡವಲು ಸಂಚು ಮಾಡಲಾಗಿದೆ ಎಂಬ ವಿವರ ಪಡೆದು ಆ ಎಲ್ಲರಿಗೂ ಎಚ್ಚರದಿಂದ ಇರುವಂತೆ ನೀಡಿದ ಸೂಚನೆ ಬಳಿಕ ಸಚಿವ ರಾಜಣ್ಣ ಅವರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
Previous Articleರಣರಂಗವಾದ ವಿಧಾನಸಭೆ, ಬಿಜೆಪಿ ಸದಸ್ಯರು ಸಸ್ಪೆಂಡ
Next Article ದುಪ್ಪಟ್ಟಾಯಿತು ಶಾಸಕ,ಸಚಿವರ ಸಂಬಳ