ನಂಜನಗೂಡು : ಕವಲಂದೆ ಗ್ರಾಮದಲ್ಲಿ ಛೋಟಾ ಪಾಕಿಸ್ತಾನ್ ಎಂದು ಘೋಷಣೆ ಕೂಗಿದ ಆರೋಪಿಗಳನ್ನ ಎನ್ ಕೌಂಟರ್ ಮಾಡಿ ಬಿಸಾಕಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಛೋಟಾ ಪಾಕಿಸ್ತಾನ ಘೋಷಣೆ ಹಿಂದೆ ಮೌಲ್ವಿಯ ಕೈವಾಡ ಇದೆ. ಮೌಲ್ವಿಯ ಪ್ರಚೋದನಾಕಾರಿ ಭಾಷಣದಿಂದಲೇ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಘೋಷಣೆ ಕೂಗಿದವರನ್ನ ಎನ್ ಕೌಂಟರ್ ಮಾಡಿ ಬಿಸಾಕಿ ಎಂದು ಹೇಳಿದರು. ಇನ್ನು ಸುಪ್ರಭಾತ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ರಂಜಾನ್ ಹಬ್ಬದ ವೇಳೆ ಸಾಮೂಹಿಕ ಪ್ರಾರ್ಥನೆ ನಂತರ ಮೈಸೂರು ಜಿಲ್ಲೆ ನಂಜನಗೂಡು ಸಮೀಪದ ಕವಲಂದೆ ಗ್ರಾಮದಲ್ಲಿ ಛೋಟಾ ಪಾಕಿಸ್ತಾನ್ ಎಂದು ಘೋಷಣೆ ಕೂಗಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿ ನಿನ್ನೆ ಇಬ್ಬರನ್ನ ಬಂಧಿಸಲಾಗಿತ್ತು.