ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟರ್ ಅನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಮುಖ್ಯಸ್ಥ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಖರೀದಿಸಿರುವುದು ಅಧಿಕೃತವಾಗಿದೆ. ಪ್ರತಿ ಷೇರಿಗೆ 54.2 ಡಾಲರ್ನಂತೆ ಸುಮಾರು 44 ಬಿಲಿಯನ್ ಡಾಲರ್ನೊಂದಿಗೆ ಟ್ವಿಟರ್ನ ಸಂಪೂರ್ಣ 100 ರಷ್ಟು ಷೇರನ್ನು ಎಲಾನ್ ಮಸ್ಕ್ ಖರಿದೀಸಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ ಕಳೆದ ಕೆಲವು ವಾರಗಳಿಂದ ಮಸ್ಕ್ ಅವರ ಆಫರ್ ಅನ್ನು ಮೌಲ್ಯಮಾಪನ ಮಾಡುತ್ತಿತ್ತು. ಕೊನೆಗೂ ಆಫರ್ಗೆ ಓಕೆ ಆಗಿದ್ದು, ಅಧಿಕೃತವಾಗಿ ಟ್ವಿಟರ್ ಎಲಾನ್ ಮಸ್ಕ್ ತೆಕ್ಕೆಗೆ ಬಿದ್ದಿರುವುದಾಗಿ ಟ್ವಿಟರ್ ಅಧ್ಯಕ್ಷ ಬ್ರೈಟ್ ಟೈಲರ್ ತಿಳಿಸಿದ್ದಾರೆ. ಮಸ್ಕ್ ಅವರು ಈ ಹಿಂದೆ ಟ್ವಿಟರ್ನಲ್ಲಿ 9.2 ರಷ್ಟು ಷೇರನ್ನು ಹೊಂದಿದ್ದರು.ಟ್ವೀಟರ್ ಖರೀದಿಯಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಇಒ ಪರಾಗ್ ಅಗರ್ವಾಲ್, ಟ್ವಿಟರ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ. ನಮ್ಮ ತಂಡದ ಮೇಲೆ ನನಗೆ ಬಹಳ ಹೆಮ್ಮ ಇದೆ ಎಂದಿದ್ದಾರೆ.