ಬೆಂಗಳೂರು Aug 30:
ಮುರುಘಾ ಶರಣರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದರೂ ಶರಣರ ವಿರುದ್ಧ ಇನ್ನೂ ಕ್ರಮ ಯಾಕೆ ಜರುಗಿಸಿಲ್ಲ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಸದಾ ಶರಣರ ಬೆನ್ನಿಗೆ ನಿಲ್ಲುತ್ತಿದ್ದ ಪ್ರಗತಿಪರರು ಮತ್ತು ಕೆಲ ದಲಿತ ಸಂಘಟನೆಗಳು ಇದೀಗ ಶರಣರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.
ಈ ಹಿಂದೆ ಧ್ಯಾನಪೀಠದ ನಿತ್ಯಾನಂದ ಸೇರಿದಂತೆ ಕೆಲ ಹಿಂದುಳಿದ ಮತ್ತು ದಲಿತ ಮಠಾಧೀಶರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಸಮಯದಲ್ಲಿ ಅವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದ್ದವು.ಆರೋಪಿಗಳ ವಿರುದ್ಧ ಕಾನೂನು ಕ್ರಮ ನಡೆದಿತ್ತು. ಮಾಧ್ಯಮಗಳಲ್ಲಿ ಈ ವಿದ್ಯಮಾನದ ವಿರುದ್ಧ ಸಾರ್ವಜನಿಕರ ಆಕ್ರೋಶ ಸ್ಪೋಟಿಸಿತ್ತು.
ಆದರೆ, ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯಿದೆಯಂತಹ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿದ್ದರೂ ಮಠದ ಸಮುದಾಯದ ಕಾರಣಕ್ಕೆ ಹಾಗೂ ಪ್ರಭಾವದ ಕಾರಣಕ್ಕೆ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ.ಇಂತಹ ಗಂಭೀರ ಆರೋಪ ಎದುರಿಸುತ್ತಿದ್ದರೂ ಶರಣರು ಪೀಠ ತ್ಯಾಗಕ್ಕೆ ಮನಸ್ಸು ಮಾಡುತ್ತಿಲ್ಲ ಯಾರೂ ಒತ್ತಾಯಿಸುತ್ತಲೂ ಇಲ್ಲ.
ಸಂತ್ರಸ್ತ ಬಾಲಕಿಯರು ಅತ್ಯಂತ ಕೆಳಸ್ತರಕ್ಕೆ ಸೇರಿದ್ದು ಒಡನಾಡಿ ಸಂಸ್ಥೆ ಮತ್ತು ಕೆಲವೇ ಕೆಲವರು ಅವರ ಪರವಾಗಿ ನಿಂತಿರುವುದನ್ನು ಬಿಟ್ಟರೆ ಬೇರೆ ಯಾರೂ ಅವರ ಬಗ್ಗೆ ಕನಿಕರ ತೋರುತ್ತಿಲ್ಲ.ಇಂತಹವರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡ ಪ್ರಭಾವಿಗಳ ಪರ ನಿಂತಿರುವುದು ಪರಿಸ್ಥಿತಿಯ ವ್ಯಂಗ್ಯ ಎಂಬ ಆರೋಪಗಳು ಕೇಳಿಬಂದಿವೆ.
ಇನ್ನೂ ಈ ವಿದ್ಯಮಾನದಲ್ಲಿನ ಕಾನೂನು ಪ್ರಕ್ರಿಯೆ ಕೂಡಾ ಸಂಶಯ ಸೃಷ್ಟಿಸಿವೆ.ಕಾಲಮಿತಿ ಎನ್ನುವುದು ಪಾಲನೆಯೇ ಆಗುತ್ತಿಲ್ಲ.ಆರೋಪಿ ಸ್ಥಾನದಲ್ಲಿರುವ ಶರಣರು ಮಠದಲ್ಲಿದ್ದಾಗಲೇ ಮಹಜರ್ ಮಾಡಿಸಿದ್ದು ,ಕೃತ್ಯ ನಡೆದ ಸ್ಥಳದಲ್ಲಿರುವಾಗ ಸಂತ್ರಸ್ತರ ಮಹಜರ್ ಮಾಡಿದ್ಧಾರೆ. ಇದರಿಂದ ಸಂತ್ರಸ್ಥರ ಮೇಲೆ ಪ್ರಭಾವ ಬೀರುವುದಿಲ್ವಾ, ಪೊಲೀಸರು ಯಾವ ರೀತಿಯ ಕಾನೂನು ಪಾಲನೆ ಮಾಡುತ್ತಿದ್ದಾರೆ.. ಆ ಮೂಲಕ ಪೋಕ್ಸೋ ಕಾಯ್ದೆ ಉದ್ದೇಶ ಉಲ್ಲಂಘನೆ ಆಗಿಲ್ವಾ. ಪೊಲೀಸರ ನಡೆಯ ಮೇಲೆ ಒಡನಾಡಿ ಸಂಸ್ಥೆಯ ಪರಶು ಅನುಮಾನ ಪಟ್ಟಿದ್ಧಾರೆ.
ಪೋಕ್ಸೋ ಕಾಯ್ದೆ ಪ್ರಕಾರ ಸಂತ್ರಸ್ತರ ಮೇಲೆ ಒತ್ತಡ ಇರಬಾರದು. ಕೇಸ್ ದಾಖಲಾಗುತ್ತಿದ್ದಂತೆ ಕೃತ್ಯ ನಡೆದಿದೆ ಎನ್ನಲಾದ ರೂಂ ಸೀಜ್ ಮಾಡ್ಬೇಕು. ಆದರೆ ಪೊಲೀಸರು ಆರೋಪಿ ಇರುವಾಗಲೇ ಸಂತ್ರಸ್ತರನ್ನು ಕರೆದೊಯ್ದಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸರ ನಡೆ ಬಗ್ಗೆ ಹಲವು ಅನುಮಾನ ಮೂಡಿದೆ. ಕೆಲವರಿಂದ ಸಾಕ್ಷ್ಯ ನಾಶ ಮಾಡಲು ಇದೆಲ್ಲಾ ಆಗ್ತಿದೆ ಎಂದು ಆರೋಪ ಮಾಡಿದ್ದಾರೆ.
ಎಲ್ಲಿದೆ ನ್ಯಾಯ..ಕಾನೂನು ಹೇಗೆ ಪಾಲಿಸಲಾಗುತ್ತಿದೆ.?
Previous Articleಯುವತಿ ದನದ ಮಾಂಸ ತಿನ್ನಿಸಿದ್ದಕ್ಕೆ ಯುವಕ ಆತ್ಮಹತ್ಯೆ
Next Article AICC ಸಾರಥಿ ಯಾರಾಗಲಿದ್ದಾರೆ?