ಧಾರವಾಹಿ ನಿರ್ಮಾಪಕನಿಂದ ಹಣಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್ ಆಗಿದ್ದಾರೆ.
ಕಿರುತೆರೆ ಹಾಗು ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ್ದ ಅರವಿಂದ್ ಕೌಶಿಕ್, ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಶಾರ್ದೂಲ, ಸಿನಿಮಾಗಳ ನಿರ್ದೇಶನ ಮಾಡಿದ್ದರು. ಕನ್ನಡ ಕಿರುತೆರೆಯಲ್ಲಿ ಅರವಿಂದ್ ಕೌಶಿಕ್ ಕಮಲಿ ಧಾರವಾಹಿ ನಿರ್ದೇಶನ ಮಾಡಿದ್ದರು. ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ ರೋಹಿತ್ 73 ಲಕ್ಷ ಹಣಹೂಡಿಕೆ ಮಾಡಿದ್ದರು.ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ ಲಾಭಾಂಶವನ್ನು ನೀಡದೇ ವಂಚಸಿರುವ ಆರೋಪದ ಹಿನ್ನೆಲೆ ನಿರ್ಮಾಪಕ ರೋಹಿತ್ ಎಂಬುವವರಿಂದ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಲಾಗುತ್ತು. ದೂರಿನನ್ವಯ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ದ 420 ಅಡಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ವೈಯ್ಯಾಲಿಕಾವಲ್ ಪೊಲೀಸರಿಂದ ನಿರ್ದೇಶಕ ಅರವಿಂದ್ ಕೌಶಿಕ್ ಬಂಧಿಸಲಾಗಿದೆ.
ಕಮಲಿ ಸೀರಿಯಲ್ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
Previous Articleಕಿಂಗ್ಪಿನ್ ದಿವ್ಯಾ ಹಾಗರಗಿ ಅರೆಸ್ಟ್..!
Next Article ಹಿಂದಿ ಹೇರಿಕೆಯ ತಂತ್ರ ಸರಿಯಲ್ಲ