ಬೆಂಗಳೂರು,ಜೂ.3:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಬಂಧಿ ಘರ್ಷಣೆಗೆ ದಿಲಾಂಜಲಿ ಹಾಡಿ ಶಾಂತಿ ನೆಲೆಸುವಂತೆ ಮಾಡಲು ಪೊಲೀಸ್ ಇಲಾಖೆ ಹಲವು ಕಟ್ಟು ನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಕೋಮು ಸಂಘರ್ಷ ನಿಷೇಧ ಕಾರ್ಯ ಪಡೆ ರಚನೆಯಾದ ಬೆನ್ನಲ್ಲೇ ಪೊಲೀಸ್ ಇಲಾಖೆ ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಪಟ್ಟಿ ಮಾಡಿ ಅವುಗಳನ್ನು ಒಂದೊಂದಾಗಿ ಜಾರಿಗೆ ತರಲು ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಕೋಮ ಸಂಬಂಧಿ ಘರ್ಷಣೆಗೆ ಕಾರಣವಾಗುತ್ತಿದ್ದ ಅಂಶಗಳ ಬಗ್ಗೆ ಪ್ರಚೋದನೆ ನೀಡಿ ಜನರನ್ನು ಕೆರಳಿಸುತ್ತಿದ್ದ ಆರೋಪಗಳ ಆಧಾರದಲ್ಲಿ ಹಲವರನ್ನು ಪಟ್ಟಿ ಮಾಡಿ ಅವರನ್ನು ಜಿಲ್ಲೆಯಿಂದ ಗಡಿ ಪಾರು ಮಾಡಲು ನಿರ್ಧರಿಸಿದೆ.
ಕೋಮು ಸಂಘರ್ಷಕ್ಕೆ ಕಾರಣರು ಎಂಬ ವರದಿಗಳ ಹಿನ್ನೆಲೆಯಲ್ಲಿ ಹಿಂದುತ್ವ ಪರ ಸಂಘಟನೆಗಳ ಮುಖಂಡರಾದ ಅರುಣ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ, ಭರತ್ ಕುಮ್ಡೇಲು, ಲತೇಶ್ ಗುಂಡ್ಯ, ಚರಣ್, ಮುಸ್ಲಿಂ ಪರ ಸಂಘಟನೆಗಳ ಮುಖಂಡರಾದ ಹಕೀಂ ಕೂರ್ನಡ್ಕ, ಅಬ್ದುಲ್ ಖಾದರ್, ಅಬ್ದುಲ್ ಲತೀಫ್, ಮೊಯಿದ್ದೀನ್ ಅದ್ನಾನ್, ಮಹಮ್ಮದ್ ಅಶ್ರಫ್, ಅಜೀಜ್, ಶಮೀರ್ ಸೇರಿದಂತೆಸ36 ಜನರ ವಿರುದ್ಧ ಗಡೀಪಾರು ಕ್ರಮ ಆರಂಭಿಸಲಾಗಿದೆ.
21 ಹಿಂದೂ ಮತ್ತು 15 ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಈ ಪಟ್ಟಿಯಲ್ಲಿದ್ದು, ಪ್ರಮುಖ ಠಾಣಾ ವ್ಯಾಪ್ತಿಗಳಿಂದ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ.
ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ವಿಟ್ಲ, ಪುಂಜಾಲಕಟ್ಟೆ, ಬೆಳ್ತಂಗಡಿ, ಪುತ್ತೂರು ನಗರ ಮತ್ತು ಗ್ರಾಮಾಂತರ, ಕಡಬ, ಉಪ್ಪಿನಂಗಡಿ, ಸುಳ್ಯ ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಗಳಿಂದ ಈ ಪಟ್ಟಿ ತಯಾರಾಗಿದ್ದು, ಇವರುಗಳಿಗೆ ಕ್ರಮ ಕ್ರಮವಾಗಿ ನೋಟೀಸ್‌ಗಳನ್ನು ಸಹಾಯಕ ಆಯುಕ್ತರು ಜಾರಿಗೊಳಿಸಿದ್ದಾರೆ
ಎಲ್ಲಾ 36 ಮಂದಿಗೂ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ನೋಟೀಸ್‌ಗಳಲ್ಲಿ, ಅವರು ಸ್ವತಃ ಅಥವಾ ತಮ್ಮ ಪರವಾಗಿ ನ್ಯಾಯವಾದಿಗಳ ಮೂಲಕ ಹಾಜರಾಗಿ ಆಕ್ಷೇಪಣೆ ಹಾಗೂ ವಾದ ಮಂಡನೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಕಾನೂನು ಪ್ರಕ್ರಿಯೆಯ ಹಂತಗಳನ್ನು ಹತ್ತಿರದಿಂದ ಅನುಸರಿಸಲಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಗಡೀಪಾರು ಕ್ರಮದ ಬಗ್ಗೆ ತೀರ್ಮಾನಿಸಲು ಲಭ್ಯವಿರುವ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
Previous Articleಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
Next Article ಕಮಲ್ ಹಾಸನ್ ಗೆ ಹೈಕೋರ್ಟ್ ತಪರಾಕಿ.

1 ಟಿಪ್ಪಣಿ
Hello admirers of healthy bird-friendly homes !
Portability is another valuable feature to consider when searching for the best air purifier for birds. Lightweight models can be moved easily between rooms, allowing you to optimize air quality wherever your birds roam. best air purifier for birds. This flexibility ensures every corner of your home remains safe and fresh for your pets.
A portable air purifier can be ideal for bird owners who travel or relocate frequently. The best-air-purifier-for-bird-owners.vercel.app provides insights on lightweight options perfect for on-the-go purification. Portability ensures your birds can have fresh air no matter where you are.
Protect Your Birds with an Effective Air Purifier – п»їhttps://best-air-purifier-for-bird-owners.vercel.app/
May you enjoy incredible bird-safe air adventures !