ಅಹಮದಾಬಾದ್: ಗುಜರಾತ್‌ನ ಪಾಟಿದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಟ್ವೀಟ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. ಉದಯಪುರದಲ್ಲಿ ಮೇ 15ರಂದು ನಡೆದ ಕಾಂಗ್ರೆಸ್ ವರಿಷ್ಠರ ಮೂರು ದಿನಗಳ ಚಿಂತನ-ಮಂಥನ ಸಭೆಗೆ ಗೈರು ಹಾಜರಾಗಿದ್ದ ಹಾರ್ದಿಕ್ ಪಟೇಲ್ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರನ್ನು ಭೇಟಿ ಬಳಿಕ ಹಾರ್ದಿಕ್ ಪಟೇಲ್ ಈ ನಿರ್ಧಾರ ಕೈಗೊಂಡಿದ್ದಾರೆ.
ಪಟೇಲ್ ಅವರು ಬಿಜೆಪಿಗೆ ಸೇರುವ ಸಾಧ್ಯತೆಗಳಿದ್ದು, ಈ ಬಗ್ಗೆ ಗುಜರಾತ್‌ನಲ್ಲಿ ವದಂತಿಗಳು ಹರಡಿವೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾರ್ದಿಕ್ ಪಟೇಲ್!
Previous Articleರಾಜೀವ್ ಗಾಂಧಿ ಹಂತಕ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
Next Article ಬುದ್ದಿ ಹೇಳಿದ್ದಕ್ಕೆ ಬಿತ್ತು ಗೂಸಾ!!