ಕುಂದಾಪುರ ಸಳ್ವಾಡಿ ಮೂಲದ ಅನಿಲ್ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಲಿ ರಾಜ್ಯಸಭಾ ಸದಸ್ಯ ಡಾ.ಮಹೇಂದ್ರ ಪ್ರಸಾದ್ ನಿಧನದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನಿಲ್ ಹೆಗ್ಡೆ ಅವರನ್ನು ನಾಮನಿರ್ದೇಶನ ಮಾಡಿದರು.
ಅನಿಲ್ ಹೆಗ್ಡೆ ಅವರು ಜೆಡಿಯು ಮತ್ತು ಚುನಾವಣಾ ಆಯೋಗದ ನಡುವೆ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜಾರ್ಜ್ ಫರ್ನಾಂಡಿಸ್ ಅವರ ಮಾನಸ ಪುತ್ರರಾಗಿದ್ದಾರೆ. ಅನಿಲ್ ಹೆಗ್ಡೆ ಪಾಟ್ನಾದ ಜೆಡಿಯು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಅನಿಲ್ ಹೆಗ್ಡೆ ಅವರು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಸಂಬಂಧಿಯಾಗಿದ್ದಾರೆ