ಹಾವೇರಿ, ಮೇ.9– ಕೃಷ್ಣಮೃಗಗಳನ್ನು ಭೇಟೆಯಾಡುತ್ತಿದ್ದ ಐವರನ್ನು ರಟ್ಟೀಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸಾದೀಕ ನವೀದ್ (45) ಮಹ್ಮದ ಅಲಿ (32) ಸಯ್ಯದ ಮುಕೀಬ್ (21)ಹಾಗೂ ಸಯ್ಯದ ನಸರುಲ್ಲಾ(52) ಹಾಗೂ ಸುಹೇಲ್ ಖಾನ್(21) ವರ್ಷ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಎರಡು ಹೆಣ್ಣು ಕೃಷ್ಣಮೃಗಗಳನ್ನು ಭೇಟೆಯಾಡಿ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದ ವೇಳೆ ರಟ್ಟೀಹಳ್ಳಿ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಪೊಲೀಸರ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.
ಬಂಧಿತರಿಂದ ಕೃಷ್ಣಮೃಗಗಳ ಭೇಟೆಯಾಡಲು ಬಳಸಿದ್ದ ಒಂದು ಸಿಂಗಲ್ ಬ್ಯಾರಲ್ ಬಂದೂಕು, ಆರು ಕೋಕಾಗಳು, ಎರಡು ಚಾಕು ಮತ್ತು ಒಂದು ಬೊಲೆರೋ ವಾಹನ ಸೇರಿದಂತೆ ವಿವಿಧ ವಸ್ತುಗಳು ಜಪ್ತಿ ಮಾಡಲಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಬಂದೂಕಿನಿಂದ ಗುಂಡು ಹೊಡೆದು ಕೃಷ್ಣಮೃಗಗಳನ್ನು ಭೇಟೆಯಾಡಿ ಕೃಷ್ಣಮೃಗಗಳ ಮಾಂಸ ಮತ್ತು ಚರ್ಮವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು.
ರಟ್ಟೀಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ ಹಾಗು ತಂಡದಿಂದ ಆರೋಪಿಗಳ ಬಂಧನವಾಗಿದ್ದು, ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.