ಮಡಿಕೇರಿ ಅ 29: ಕೊಡಗು ಜಿಲ್ಲೆಯಾದ್ಯಂತ ಮಳೆ ಆರ್ಭಟಿಸುತ್ತಿದೆ. ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಗ್ರಾಮಗಳಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಕೊಯನಾಡು, ಚೆಂಬು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಮಾರ್ಪಡ್ಕ ಊರುಬೈಲು ಸೇತುವೆಯ ಎರಡೂ ಬದಿ ಕುಸಿತವಾಗಿ ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟಿಗೆ ಬೃಹತ್ ಗಾತ್ರದ ಮರದ ದಿಮ್ಮಿಗಳು ಬಂದು ಅಡ್ಡಲಾಗಿ ನಿಂತು, ಈ ಪರಿಸರದ ಹಲವು ಮನೆಗಳು ಜಲಾವೃತಗೊಂಡಿದೆ.
ಚೆಂಬು ಗ್ರಾಮದ ಆನೆಹಳ್ಳ ಎಂಬಲ್ಲಿ ಕಿಂಡಿ ಅಣೆಕಟ್ಟು ನೀರಿನಲ್ಲಿ ಕೊಚ್ಚಿಹೋಗಿದ್ದು , ದಬ್ಬಡ್ಕದಲ್ಲೂ ಗುಡ್ಡ ಕುಸಿದಿದ್ದು, ಸಮೀಪದ ರವಿ ಎಂಬವರ ಮನೆಗೆ ಹಾನಿ ಸಂಭವಿಸಿದೆ.
ಇತ್ತೀಚಿಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದ ಮಾರ್ಪಡ್ಕ – ಊರುಬೈಲು ಸೇತುವೆಯ ಎರಡೂ ಬದಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಈ ಪರಿಸರದ ಹಲವು ಕೃಷಿಕರ ಅಡಿಕೆ ತೋಟಗಳು ನೀರಿನಿಂದ ಆವೃತಗೊಂಡಿದೆ.
Previous Articleನೋಯ್ಡಾ ಟ್ವಿನ್ ಟವರ್ ಧ್ವಂಸ ಮಾಡಿದ್ದು ಯಾಕೆ ಗೊತ್ತಾ..?
Next Article ಮುಳುಗುತ್ತಿದ್ದ ಬಸ್ ನಿಂದ ಪ್ರಯಾಣಿಕರು ಪಾರು