ಬೆಳಗಾವಿ ವಿಚಾರವಾಗಿ ಪದೇ ಪದೇ ತಗಾದೆ ತೆಗೆಯುತ್ತಿರುವ ಎಂಇಎಸ್ ಮತ್ತು ಮಹರಾಷ್ಟ್ರ ರಾಜಕಾರಣಿಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಹಲವಾರು ಪ್ರದೇಶಗಳಿವೆ ಅವುಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ನಾವು ಯೋಚಿಸುತ್ತಿದ್ದೇವೆ‘ ಎಂದಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಗಡಿ ಬಗ್ಗೆ ಈಗಾಗಲೇ ಎಲ್ಲವೂ ನಿರ್ಣಯ ಆಗಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ನೆಲದಲ್ಲಿ ಒಂದಿಂಚು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ‘ ಎಂದು ಹೇಳಿದ್ದಾರೆ.
‘ಮಹಾರಾಷ್ಟ್ರ ರಾಜಕಾರಣ ಯಾವಾಗ ಇಕ್ಕಟ್ಟಿಗೆ ಸಿಲುಕುತ್ತದೊ ಆಗೆಲ್ಲ ಅವರು ಕರ್ನಾಟಕದ ಗಡಿ ವಿಚಾರ ತೆಗೆಯುತ್ತಾರೆ. ಅವರ ರಾಜಕೀಯ ಉಳಿವಿಗಾಗಿ ಭಾಷೆ, ಗಡಿ ವಿಚಾರವನ್ನು ಎತ್ತವುದು ಅತ್ಯಂತ ಸಣ್ಣತನ. ಅದನ್ನು ಅವರು ಕೈ ಬಿಡಬೇಕು ಎಂದು ನಾನು ಒತ್ತಾಯಿಸುತ್ತೇನೆ’ ಎಂದರು.
Previous Articleಮಂಡ್ಯಕ್ಕೂ ಕಾಲಿಟ್ಟ ಬುಲ್ಡೋಜರ್ ರಾಜಕೀಯ!!
Next Article ಬಾಹುಬಲಿ, ದಂಗಲ್ ದಾಖಲೆ ಉಡೀಸ್