Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ ನೀರು ಕುಡಿಸಿದ ಮುಂಬೈ
    ಸುದ್ದಿ

    ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ ನೀರು ಕುಡಿಸಿದ ಮುಂಬೈ

    vartha chakraBy vartha chakraಮೇ 7, 2022Updated:ಮೇ 7, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಮುಂಬಯಿ: ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಆಡಿರುವ 10 ಪಂದ್ಯಗಳಲ್ಲಿ ಶುಕ್ರವಾರವಷ್ಟೇ ತನ್ನ ಎರಡನೇ ಗೆಲುವನ್ನು ದಾಖಲಿಸಿದೆ, ಅದೂ ರೋಚಕವಾಗಿ! ಕೊನೆಯ ಓವರ್ ತನಕವೂ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಬಿಗುವಾದ ದಾಳಿ ಸಂಘಟಿಸಿದ ಡ್ಯಾನಿಯಲ್ ಸ್ಯಾಮ್ಸ್ ಕೇವಲ ಮೂರು ರನ್ ನೀಡಿ, ಮುಂಬೈಯನ್ನು ಗೆಲ್ಲಿಸಿದರು.
    ಶುಕ್ರವಾರ ರಾತ್ರಿ ನಡೆದ ಟಾಟಾ ಐಪಿಎಲ್ ಪಂದ್ಯಾವಳಿಯ 51ನೇ ಪಂದ್ಯದಲ್ಲಿ ಮುಂಬೈ ತಂಡವು ಗುಜರಾತ್‌ ವಿರುದ್ಧ ಐದು ರನ್‌ಗಳ ಅಂತರದ ಗೆಲುವು ದಾಖಲಿಸಿದೆ.
    ಟಾಸ್ ಗೆದ್ದ ಗುಜರಾತ್, ಫೀಲ್ಡಿಂಗ್ ಆಯ್ದುಕೊಂಡಿತು. ಟೂರ್ನಿಯಲ್ಲಿ ಕೇವಲ 3ನೇ ಬಾರಿ ಮುಂಬೈ ಆರಂಭಿಕರು ಅರ್ಧ ಶತಕದ ಜತೆಯಾಟವಾಡಿದರು. ಇಶಾನ್ ಕಿಶನ್ (45 ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್), ನಾಯಕ ರೋಹಿತ್ ಶರ್ಮ (43 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಟಿಮ್ ಡೇವಿಡ್ (ಕೇವಲ 21 ಎಸೆತಗಳಲ್ಲಿ 44 ರನ್, 2 ಬೌಂಡರಿ, 4 ಸಿಕ್ಸರ್) ಜವಾಬ್ದಾರಿಯುತ ಆಟದ ನೆರವಿನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 177 ರನ್ ಕಲೆಹಾಕಿತು. ರಶೀದ್ ಖಾನ್ 24 ರನ್‌ಗೆ ಎರಡು ವಿಕೆಟ್ ಪಡೆದುದಲ್ಲದೆ, 4 ಕ್ಯಾಚ್ ತೆಗೆದುಕೊಂಡು ಮಿಂಚಿದರು.
    ಉತ್ತರವಾಗಿ ಗುಜರಾತ್ ಆರಂಭಕಾರರಿಬ್ಬರೂ ಅರ್ಧ ಶತಕ ಬಾರಿಸಿದ್ದರಿಂದ ಗುಜರಾತ್ ಸುಲಭವಾಗಿ ಗೆಲ್ಲುತ್ತದೆ ಎಂದೇ ನಿರೀಕ್ಷಿಸಲಾಗಿತ್ತು, ವೃದ್ಧಿಮಾನ್ ಸಾಹಾ (55 ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್), ಶುಭಮಾನ್ ಗಿಲ್ (52 ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ನಾಯಕ ಹಾರ್ದಿಕ್ 14 ಎಸೆತಗಳಲ್ಲಿ 24 ರನ್ ಬಾರಿಸಿದರು. ಮುಂಬೈ ವೇಗಿ ಜಸ್‌ಪ್ರೀತ್ ಬುರ್ಮಾ 4 ಓವರ್‌ಗಳಲ್ಲಿ 48 ರನ್ ಬಿಟ್ಟುಕೊಟ್ಟರು. ಆದರೆ, ಹಾರ್ದಿಕ್ ಮತ್ತು ರಾಹುಲ್ ಟೆವಾಟಿಯಾ ರನೌಟ್ ಆಗಿದ್ದು ತಂಡಕ್ಕೆ ಮುಳುವಾಯಿತು. ಕೊನೆಯ ಓವರ್‌ನಲ್ಲಿ 9 ರನ್‌ಗಳು ಬೇಕಿದ್ದವು . ಆದರೆ, ಮಿಲ್ಲರ್ ಅವರಂತಹ ಬ್ಯಾಟ್ಸ್ ಮನ್ ಕ್ರೀಸ್‌ನಲ್ಲಿದ್ದರೂ ಅವುಗಳನ್ನು ಗಳಿಸಲು ಗುಜರಾತ್ ತಂಡಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಗುಜರಾತ್ 5 ವಿಕೆಟ್‌ಗೆ 172 ರನ್‌ಗಳಿಗೆ ತೃಪ್ತಿ ಪಡಬೇಕಾಯಿತು. ಆದರೂ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿರುವ ಅದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ದೃಢವಾಗಿ ಅಲಂಕರಿಸಿದೆ.
    ಶನಿವಾರ ಎರಡು ಪಂದ್ಯಗಳು ನಡೆಯಲಿದ್ದು, ಮೊದಲಿಗೆ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾದರೆ, ಮತ್ತೊಂದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಸೆಣಸಲಿವೆ.

    Verbattle
    Verbattle
    Verbattle
    mumbai indians will qualify
    Share. Facebook Twitter Pinterest LinkedIn Tumblr Email WhatsApp
    Previous Articleಐಎಎಸ್ ಅಧಿಕಾರಿಗಳಿಗೆ ಜೈಲು…
    Next Article Costly ಲೈಪು…
    vartha chakra
    • Website

    Related Posts

    ಇರಾನ್ ಪ್ರತಿಭಟನೆ: ಸಾವಿನ ಸಂಖ್ಯೆ 5,000ಕ್ಕೆ ಏರಿಕೆ – ಸರ್ಕಾರಿ ಅಧಿಕಾರಿಯಿಂದಲೇ ಬಹಿರಂಗ!

    ಜನವರಿ 18, 2026

    ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

    ಜನವರಿ 18, 2026

    ವಿಮಾನ ಸೇವೆ ವ್ಯತ್ಯಯ: ಇಂಡಿಗೋಗೆ ಭಾರಿ ದಂಡ!

    ಜನವರಿ 18, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಿಗ್‌ ಬಾಸ್‌ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!

    ಇರಾನ್ ಪ್ರತಿಭಟನೆ: ಸಾವಿನ ಸಂಖ್ಯೆ 5,000ಕ್ಕೆ ಏರಿಕೆ – ಸರ್ಕಾರಿ ಅಧಿಕಾರಿಯಿಂದಲೇ ಬಹಿರಂಗ!

    ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

    ವಿಮಾನ ಸೇವೆ ವ್ಯತ್ಯಯ: ಇಂಡಿಗೋಗೆ ಭಾರಿ ದಂಡ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Edithbaf ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • ErnestMes ರಲ್ಲಿ ನಿರ್ಮಲಾ ಸೀತರಾಮನ್ ಆಪ್ತನ ಹೆಸರಲ್ಲಿ ಧೋನಿ ಮ್ಯಾನೇಜರ್ ಗೆ ವಂಚನೆ
    • AlbertQuida ರಲ್ಲಿ ವಿಬಿಜಿ ರಾಮ್ ಜಿ ಗೆ ವಿಶೇಷ ಅಧಿವೇಶನ
    Latest Kannada News

    ಬಿಗ್‌ ಬಾಸ್‌ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!

    ಜನವರಿ 18, 2026

    ಇರಾನ್ ಪ್ರತಿಭಟನೆ: ಸಾವಿನ ಸಂಖ್ಯೆ 5,000ಕ್ಕೆ ಏರಿಕೆ – ಸರ್ಕಾರಿ ಅಧಿಕಾರಿಯಿಂದಲೇ ಬಹಿರಂಗ!

    ಜನವರಿ 18, 2026

    ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

    ಜನವರಿ 18, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.