ದೆಹಲಿ: ಮಾರಣಾಂತಿಕ ಕೋವಿಡ್ ಸೋಂಕು ನಿಯಂತ್ರಣಗೊಳಿಸುವ ದೃಷ್ಟಿಯಿಂದ ಲಸಿಕೆ ಹಾಕುತ್ತಿರುವ ಸರ್ಕಾರ ಸಿನೆಮ ಮಂದಿರ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವವರು ಲಸಿಕೆ ಹಾಕುವುದನ್ನ ಕಡ್ಡಾಯಗೊಳಿಸಿರುವ ಕ್ರಮಕ್ಕೆ ಸುಪ್ರಿಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಸಂಪೂರ್ಣ ವೈಯಕ್ತಿಕ. ಈ ವಿಷಯದಲ್ಲಿ ಯಾರನ್ನೂ ಕೂಡ ಬಲವಂತಪಡಿಸಬಾರದು ಎಂದು ಹೇಳಿರುವ ಕೋರ್ಟ್ ಕಡ್ಡಾಯ ಲಸಿಕೆ ಕುರಿತಾಗಿ ವಿವಿಧ ರಾಜ್ಯ ಸರ್ಕಾರಗಳು ಹೊರಡಿಸಿರುವ ಎಲ್ಲಾ ಆದೇಶಗಳನ್ನು ರದ್ದುಪಡಿಸುವಂತೆ ನಿರ್ದೇಶಿಸಿದೆ.
ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಉಂಟಾದ ಅಡ್ಡ ಪರಿಣಾಮಗಳ ಬಗ್ಗೆ ವರದಿಯೊಂದನ್ನು ನೀಡುವಂತೆ ಸೂಚಿಸಿರುವ ನ್ಯಾಯಪೀಠ ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.