ಬೆಂಗಳೂರು,ಜೂ.9- ಮನೆಗಳವು, ವಾಹನಗಳವು, ಸುಲಿಗೆ, ದರೋಡೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 20 ಖದೀಮರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ವೈಟ್ಫೀಲ್ಡ್ ವಿಭಾಗದ ಪೊಲೀಸರು 1.65ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್ಎಎಲ್, ಕಾಡುಗೋಡಿ, ಕೆ.ಆರ್.ಪುರ, ಮಾರತ್ತಹಳ್ಳಿ, ಬೆಳ್ಳಂದೂರು , ವೈಟ್ಫೀಲ್ಡ್ನ ಹಲವೆಡೆ ನಡೆದಿರುವ ಕಾರು, ದ್ವಿಚಕ್ರ ವಾಹನ, ಸರಗಳ್ಳತನ ಪ್ರಕರಣಗಳನ್ನು ಬೇಧಿಸಿ 1.65ಕೋಟಿ ಮೌಲ್ಯದ 9 ಕಾರುಗಳು 45 ದ್ವಿಚಕ್ರ ವಾಹನಗಳು, 135 ಮೊಬೈಲ್ಗಳು, 1 ಲ್ಯಾಪ್ಟಾಪ್, 5 ಕ್ಯಾಮರಾ, 150 ಗ್ರಾಂ ಚಿನ್ನಾಭರಣ ಹಾಗೂ 1.5ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.,
ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಲಾಸಿ ಜೀವನ ನಡೆಸಲು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಸುಳ್ಳು ನೆಪಹೇಳಿ ಕಾರ್ಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿ ಚರಣ್ರಾಜ್ ನನ್ನು ಬಂಸಿ, ಆತನಿಂದ ಸುಮಾರು 1 ಕೋಟಿ ಬೆಲೆ ಬಾಳುವ ವಿವಿಧ ಕಂಪನಿಗಳ 8 ಕಾರ್ಗಳು ಮತ್ತು ವಿವಿಧ ಕಂಪನಿಗಳ ಒಟ್ಟು 5 ಕ್ಯಾಮರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಡುಗೋಡಿ ಪೊಲೀಸರು, ಸುಬಾನ್, ಅಬ್ಬಾಜ್, ಮತ್ತು ಸಲೀಮ್ ಎಂಬ ಆರೋಪಿಗಳನ್ನು ಬಂಸಿ, ಅವರಿಂದ ಸುಮಾರು 15.20 ಲಕ್ಷರೂ ಬೆಲೆ ಬಾಳುವ 23 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆ.ಆರ್.ಪುರ ಪೊಲೀಸರು, ಕಾರು, ಬೈಕ್, ಸರಗಳವು ಪ್ರಕರಣಗಳಲ್ಲಿ ಲೋಕೇಶ್, ರವಿ ತೇಜ, ಜಗನ್, ಅವಲ ಕವಾಡಿ , ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಶಶಾಂಕ್, ಮೊಬೈಲ್ ಕಳವು ಮಾಡುತ್ತಿದ್ದ ಶಕ್ತಿ ವೇಲ್ , ವಿಜಯ್ ನನ್ನು ಬಂಧಿಸಿ 20 ಲಕ್ಷ ಬೆಲೆಯ ಬಾಳುವ ವಿವಿಧ ಕಂಪನಿಗಳ ಒಟ್ಟು 128 ಮೊಬೈಲ್ ಪೋನುಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ 5 ಲಕ್ಷರೂ ಬೆಲೆಬಾಳುವ ಹೊಂಡಾ ಅಮೇಜ್ ಕಾರ್, 60 ಗ್ರಾಂ ತೂಕದ ಎರಡು ಚಿನ್ನದ ಸರಗಳು, 9 ಲಕ್ಷ ಬೆಲೆಯ ವಿವಿಧ ಕಂಪನಿಗಳ ಒಟ್ಟು 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
Previous Articleರಜಿನಿ ಸಿನಿಮಾದಲ್ಲಿ ನಟನೆ: ಹ್ಯಾಟ್ರಿಕ್ ಹೀರೋ ಘೋಷಣೆ
Next Article ಜುಲೈ 1ರಂದು ಬೈರಾಗಿ