ಬೆಂಗಳೂರು : ಕೋವಿಡ್ ಸಂಕಷ್ಟ ದಿನ ಈಗಷ್ಟೇ ಚೇತರಿಸಿಕೊಳ್ಳುತ್ತಿರೋ ಸಾರ್ವಜವಿಕರಿಗೆ ಖಾಸಗಿ ಬಸ್ ಪ್ರಯಾಣದರ ಏರಿಕೆ ಮತ್ತಷ್ಟು ಬಿಸಿ ಮುಟ್ಟಿಸಿದೆ.
ಇದೀಗ ಶಾಲೆಗಳಿಗೆ ಬೇಸಿಗೆ ರಜೆ ಇದ್ದು ಪ್ರವಾಸದ ಸೀಜನ್ ಆಗಿರೋ ಕಾರಣ ಜಿ ಊರಿಗೆ ಪ್ರಯಾಣಿಸೋದು ಹೆಚ್ಚು ಆದರೆ ಇದೆ ನೆಪ ಮಾಡಿಕೊಂಡು ಖಾಸಗಿ ಬಸ್ ಗಳು ಟಿಕೆಟ್ ದರವನ್ನು ಯುದ್ವಾ ತದ್ವಾ ಹೆಚ್ಚಿಸಿವೆ. ಉದಾಹರಣೆಗೆ ಬೆಂಗಳೂರಿಂದ ಮಂಗಳೂರಿಗೆ ಮಾಮೂಲಿ ದಿನದಲ್ಲಿ 650-700 ರು ಇದ್ರೆ ಈಗ 1000ರು ತಲುಪಿದೆ. ಕುಂದಾಪುರಕ್ಕೆ 1200,1500, 2000ರೂ. ಆಗಿದೆ.
ಮೊದಲೆ ಆರ್ಥಿಕ ಸಂಕಷ್ಟ ಇರುವ ಜನರು ಬಸ್ ದರ ಏರಿಕೆ ಕಂಡು ಪೆಚ್ಚಾಗಿದ್ದಾರೆ. ಅನಿವಾರ್ಯ ಪ್ರಯಾಣ ಮಾಡಬೇಕಾದವರು ಬಸ್ ಮಾಲೀಕರಿಗೆ ಹಿಡಿಶಾಪ ಹಾಕಿ ಪ್ರಯಾಣಿಸುತ್ತಿದ್ದಾರೆ. ಕೆಲವೆಡೆ ಬಸ್ ದರ ಹೆಚ್ಚಿದ್ದರೂ ಸೀಟ್ ಸಿಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಇನ್ನು ಹೆಚ್ಚಿನ ಜನ ಸರ್ಕಾರಿ ಬಸ್ ಮೊರೆ ಹೋಗಿದ್ದು ಖಾಸಗಿ ಬಸ್ ಗೆ ಹೋಲಿಸಿದ್ರೆ ಇದರ ದರ ತುಸು ಕಡಿಮೆ ಇದೆ ಅನ್ನೋದು ಸಮಾಧಾನದ ಸಂಗತಿ