ಮಂಡ್ಯ.ಜು.22:
ರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ ಮಾಡುವ ಗಂಗಾರತಿ ಮಾದರಿಯ ರೀತಿ ಕಾವೇರಿ ಆರತಿ ಮಾಡಲು ಚಿಂತಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ
ಕೃಷ್ಣರಾಜಸಾಗರ ಅಣೆಕಟ್ಟಿನ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಕಾವೇರಿ ಆರತಿಯನ್ನು ಪ್ರಾರಂಭಿಸಲು ಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸಿ ಒಂದು ತಿಂಗಳೊಳಗೆ ವರದಿ ನೀಡಲು ತಿಳಿಸಲಾಗುವುದು ಎಂದರು.
ಕೆರೆತುಂಬಿಸಲು ಕ್ರಮ:
ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕೆ.ಆರ್.ಎಸ್. ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ ನೀರು ಬಿಡುಗಡೆ ಮಾಡಿ ಜಲಾನಯನ ಪ್ರದೇಶದಲ್ಲಿ ಬರುವ 1657 ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು
ಕೆ.ಆರ್.ಎಸ್ ನಲ್ಲಿರುವ ಮ್ಯೂಸಿಕಲ್ ಪಾರ್ಕ್ ನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಹೊಸ ರೂಪ ನೀಡಲು ಈಗಾಗಲೇ ತಾಂತ್ರಿಕ ವರದಿಯನ್ನು ಪಡೆಯಲಾಗಿದೆ. ಇದನ್ನು ಪಿ.ಪಿ.ಪಿ ಮಾದರಿಯಲ್ಲಿ ರೂಪಿಸಲಾಗುವುದು.ಈ ಪಾರ್ಕ್ ನಿಂದ ಸುಮಾರು 8 ರಿಂದ 10 ಸಾವಿರ ಸ್ಥಳೀಯ ಜನರಿಗೆ ಉದ್ಯೋಗ ಸಿಗಲಿದೆ ಎಂದರು.
Previous Articleನಾನೇಕೆ ರಾಜೀನಾಮೆ ಕೋಡಬೇಕೆಂದ ಸಿಎಂ ಸಿದ್ದರಾಮಯ್ಯ.
Next Article ರಾಜ್ಯದಲ್ಲಿ ಔಷಧಿಗಳ ಕೊರತೆ ಇಲ್ಲ.


2 ಪ್ರತಿಕ್ರಿಯೆಗಳು
No Mostbet cada aposta tem gosto de vitГіria desde o primeiro dia – https://mostbetpt.pro/bonus/ , Mostbet: onde os sonhos de jackpot comeГ§am com +125% de bГґnus .
Live the high life — one hand, one spin, one win at a time – http://aranitidine.com/mostbet-casino-recenze-2026-nejlepsi-online-kasino-pro-cechy-s-bonusem-250-fs/ , The casino dreams about players like you .