ಜಮ್ಮು-ಕಾಶ್ಮೀರ,ಮೇ.14- ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಆರ್‌ಎಸ್‌ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿ ಭಾಗವನ್ನು ಪ್ರವೇಶಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದೆ.
ಆರ್‌ಎಸ್ ಪುರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತರಾಷ್ಟ್ರೀಯ ಗಡಿ ಬಳಿ ಹಾರಾಡುತ್ತಿದ್ದ ಡ್ರೋನ್‌ವೊಂದನ್ನು ಇಂದು ಮುಂಜಾನೆ 4.45ರ ವೇಳೆ ಯೋಧರು ಪತ್ತೆ ಹಚ್ಚಿದ್ದಾರೆ.
ಗಡಿ ದಾಟುತ್ತಿದ್ದ ಡ್ರೋನ್ಗೆ ಏಳರಿಂದ ಎಂಟು ಸುತ್ತು ಗುಂಡು ಹಾರಿಸಲಾಗಿತ್ತು. ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂದಿರುಗಿತು ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ. ಬಿಎಸ್‌ಎಫ್ ತನ್ನ ಚುರುಕುತನದಿಂದಾಗಿ ಗಡಿಯುದ್ದಕ್ಕೂ ಭಯೋತ್ಪಾದಕರು ಮತ್ತು ಅವರ ಯೋಜನೆಗಳನ್ನು ವಿಫಲಗೊಳಿಸುತ್ತಿದೆ.
ಕಳೆದ ಮೇ 7 ರಂದು ಕೂಡ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಬರುತ್ತಿದ್ದ ಡ್ರೋನ್ ಮೇಲೆ ಬಿಎಸ್ಎಫ್ ಗುಂಡು ಹಾರಿಸಿತ್ತು. ಈ ಡ್ರೋನ್ ಕೂಡ ಹಿಂದಕ್ಕೆ ಹೋಗುವಂತೆ ಮಾಡಿತ್ತು.