ಬೆಂಗಳೂರು,ಮಾ.11-
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೈತಿಕತೆ ಹಾಗೂ ಬದುಕು ರೂಪಿಸಿಕೊಳ್ಳಲು ಪಾಠ ಪ್ರವಚನಗಳ ಮೂಲಕ ಮಾರ್ಗದರ್ಶನ ಮಾಡಬೇಕಾದ ಉಪನ್ಯಾಸಕರು ಆಭರಣ ಪ್ರದರ್ಶನ ಮೇಳಗಳಲ್ಲಿ, ಗ್ರಾಹಕರಂತೆ ಹೋಗಿ ಚಿನ್ನಾಭರಣಗಳನ್ನು ಕದ್ದು ಪೊಲೀಸರ ಅತಿಥಿಯಾಗಿದ್ದಾರೆ.
ಆಭರಣ ಪ್ರದರ್ಶನ ಮೇಳದಲ್ಲಿ ಚಿನ್ನಾಭರಣ
ಕಳವು ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ
ಸುಬ್ರಮಣ್ಯನಗರ ಪೊಲೀಸರು ಮೈಸೂರಿನ ಉದಯಗಿರಿಯ ಉಪನ್ಯಾಸಕಿ ಜಹೀರಾ ಫಾತೀಮಾ ಎಂಬುವರನ್ನು ಬಂಧಿಸಿ ಅವರಿಂದ 8 ಲಕ್ಷ ಮೌಲ್ಯದ 78 ಗ್ರಾಂ ಚಿನ್ನ 12 ಗ್ರಾಂನ ಒಂದು ಡೈಮಂಡ್ ಬ್ರೇಸ್‍ಲೇಟ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ರಾಜಾಜಿನಗರದ ರಾಜ್‍ಕುಮಾರ್ ರಸ್ತೆಯ ಹೋಟೆಲ್‍ವೊಂದರಲ್ಲಿ ಜ್ಯೂವೆಲರಿ ಅಂಗಡಿಗಳ ಪ್ರದರ್ಶನವನ್ನು ಕಳೆದ ಜನವರಿಯಲ್ಲಿ ಏರ್ಪಡಿಸಲಾಗಿತ್ತು.ಈ ವೇಳೆ ಪ್ರದರ್ಶನದಲ್ಲಿದ್ದ ಭರತ್‍ಕುಮಾರ್ ಎಂಬುವರ ಅಂಗಡಿಗೆ ಗ್ರಾಹಕಳ ಸೋಗಿನಲ್ಲಿ ಬಂದ ಜಹೀರಾ ಫಾತೀಮಾ 4,75,000/-ಬೆಲೆ ಬಾಳುವ 11.950 ಗ್ರಾಂನ ಒಂದು ಡೈಮಂಡ್ ಬ್ರೇಸ್‍ಲೇಟ ಮತ್ತು 59.100 ಗ್ರಾಂ ಚಿನ್ನದ ಬಳೆಯನ್ನು ಕಳವು ಮಾಡಿ ಪರಾರಿಯಾಗಿದ್ದರು.
ಈ ಸಂಬಂಧಿಸ ದಾಖಲಾದ ದೂರು ಆಧರಿಸಿ ತನಿಖೆ ನಡೆಸಿಊ ಸುಬ್ರಮಣ್ಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
ಆರೋಪಿಯು ಕಳವು ಮಾಡಿದ ಚಿನ್ನಾಭರಣಗಳ ಪೈಕಿ 15 ಗ್ರಾಂ ಚಿನ್ನದ ಬಳೆ ಮತ್ತು 12 ಗ್ರಾಂನ ಡೈಮಂಡ್ ಬ್ರಾಸ್‍ಲೆಟ್‍ನ್ನು ಮೈಸೂರಿನಲ್ಲಿರುವ ಆಕೆಯ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
Previous Articleಇವರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ
Next Article ಕುಕ್ಕೆಯಲ್ಲಿ ಕತ್ರಿನಾ ಕೈಫ್ ಸಂತಾನ ಪ್ರಾಪ್ತಿ ಪೂಜೆ.