ಜಪಾನ್ ದೇಶದ ಸರ್ಕಾರಕ್ಕೆ ಹೊಸದೊಂದು ಸಮಸ್ಯೆ ಎದುರಾಗಿದೆ ಅದೇನಂತ ಕೇಳ್ತೀರಾ? ಜಪಾನ್ ದೇಶದಲ್ಲಿ ಯುವಕರು ಕುಡಿಯೊದನ್ನ ಕಡಿಮೆ ಮಾಡದ್ದಾರಂತೆ. ಏನನ್ನ ಕುಡಿಯೋದು? ಆಲ್ಕೋಹಾಲ್ ಕುಡಿಯೋದು ಕಡಿಮೆ ಮಾಡಿದ್ದಾರಂತೆ. ಕೋವಿಡ್ ಆರಂಭವಾದಾಗಿನಿಂದ ಜಪಾನಿನಲ್ಲಿ ಜನ ಕಡಿಯೋದನ್ನ ಕಡಿಮೆ ಮಾಡಿದ್ದಾರೆ. ಆ ಕಾರಣದಿಂದಾಗಿ ಆಲ್ಕೋಹಾಲ್ ಗೆ ಸಂಬಂಧಪಟ್ಟಂತಹ ವ್ಯವಹಾರಗಳು ಅಂದರೆ ರೆಸ್ಟೋರೆಂಟ್ ಗಳು, ಬಾರ್ ಗಳು, ಪಬ್ ಗಳು, ಡಿಸ್ಕೋಗಳಲ್ಲಿ ವ್ಯಾಪಾರ ಕಡಿಮೆಯಾಗಿ ನಷ್ಟವಾಗುತ್ತದೆಯಂತೆ. ಮಾತ್ರವಲ್ಲದೆ ಮದ್ಯದಿಂದ ಬರುವಂತಹ ತೆರಿಗೆಯೂ ಕಡಿಮೆಯಾಗಿ, ಸರ್ಕಾರಕ್ಕೂ ಸಮಸ್ಯೆಯಾಗುತ್ತಿದೆಯಂತೆ. ಆ ಕಾರಣದಿಂದಾಗಿ ರಾಷ್ಟ್ರೀಯ ತೆರಿಗೆ ಇಲಾಖೆ ಯುವಕರನ್ನು ಕುಡಿಯುವ ಆಸಕ್ತಿಯ ಕಡೆ ಸೆಳೆಯಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆಯಂತೆ. ಸೇಕ್ ವೈವಾ ಎಂಬ ಕಾರ್ಯಕ್ರಮ ಆಯೋಜಿಸಿ ಆ ಮೂಲಕ ಯಾವ ಯಾವ ರೀತಿಯಲ್ಲಿ ಯುವಕರನ್ನು ಮದ್ಯದ ಕಡೆಗೆ ಸೆಳೆಯಬಹುದು ಎಂದು ಈ ಇಲಾಖೆ ಯೋಚಿಸುತ್ತಿದೆಯಂತೆ. ಅದಕ್ಕಾಗಿ ಸೋಶಿಯಲ್ ಮೀಡಿಯ ಮತ್ತು ಮೆಟವರ್ಸ್ ಎಲ್ಲಾ ಆಯಾಮಗಳನ್ನು ಬಳಸಿ ಯುವಜನತೆಯನ್ನು ಮದ್ಯ ಸೇವಿಸುವುದಕ್ಕೆ ಆಸಕ್ತಿ ಮೂಡಿಸುವ ಕೆಲಸ ನಡೆದಿದೆಯಂತೆ. ಈ ಪ್ರಯತ್ನದ ಬಗ್ಗೆ ಅನೇಕ ಕಡೆ ವಿರೋಧವೂ ವ್ಯಕ್ತವಾಗಿ, ಸರ್ಕಾರದ ಈ ನಡೆ ವ್ಯಾಪಕ ಠೀಕೆಗೂ ಒಳಗಾಗಿದೆ. ಮದ್ಯದಿಂದ ದೂರವಿರುವುದು ಹೆಚ್ಚು ಸೂಕ್ತ. ಆದರೆ, ಸರ್ಕಾರವೇ ಯುವಕರನ್ನು ಮದ್ಯ ಸೇವಿಸಲು ಪ್ರೇರೇಪಿಸುತ್ತಿದೆ. ಇದು ಯಾವ ರೀತಿಯ ಯೋಜನೆ? ಎಂದು ಠೀಕೆ ಮಾಡುತ್ತಿದ್ದಾರಂತೆ. ಆದರೂ ಸದ್ಯಕ್ಕೆ ಸರ್ಕಾರದ ತೆರಿಗೆ ಇಲಾಖೆ ಈ ರೀತಿಯ ಪ್ರಯತ್ನವನ್ನು ಮುಂದುವರಿಸುತ್ತಿದೆ ಎನ್ನುವುದು ವರದಿಯಾಗಿದೆ.
ಜಪಾನ್ ಸರ್ಕಾರಕ್ಕೆಕುಡಿಯದವರಿಂದ ತಲೆನೋವು
Previous Articleಮಹಿಳೆಯರ ಮೇಲಿನ ದೌರ್ಜನ್ಯ ದೆಹಲಿಯೇ ನಂಬರ್ 1..ಬೆಂಗಳೂರು ಕಮ್ಮಿಯೇನಲ್ಲ
Next Article ಯುವತಿ ದನದ ಮಾಂಸ ತಿನ್ನಿಸಿದ್ದಕ್ಕೆ ಯುವಕ ಆತ್ಮಹತ್ಯೆ