ಬೆಂಗಳೂರು,ಸೆ.5-
ತಮ್ಮ ಗೆಳತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದರೆ, ಜೈಲಿನ ಮುಂಭಾಗದಲ್ಲಿ ಮಹಿಳೆ ಯೊಬ್ಬರು ರಂಪಾಟ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿಗೆ ಬಂದಿರುವ ಲಕ್ಷ್ಮಿ ಎಂಬ ಮಹಿಳೆ ದರ್ಶನ್ ಏನು ತಪ್ಪು ಮಾಡಿದ್ದಾರೆ ಎಂದು ಜೈಲಿನಲ್ಲಿಟ್ಟಿದ್ದಾರೆ?, ಪರಪ್ಪನ ಜೈಲಿನಲ್ಲಿ ಸಿಗರೇಟ್ ಸೇದಿದರು ಎಂಬ ಕಾರಣಕ್ಕಾಗಿ ಬಳ್ಳಾರಿಗೆ ತಂದು ಹಾಕಿದ್ದಾರೆ. ಯಾರೂ ಬೀಡಿ, ಸಿಗರೇಟು ಸೇದುವುದೇ ಇಲ್ಲವೇ?, ಅದೇನು ಮಹಾಪರಾಧವೇ? ಎಂದು ಪ್ರಶ್ನಿಸಿದರು.
ನಟ ದರ್ಶನ್ ಅವರನ್ನು ನೋಡಲೇಬೇಕು ನಾನು ಅವರನ್ನು ಮದುವೆ ಆಗುತ್ತೇನೆ ಅವರನ್ನು ನೋಡಲು ಬಿಡಿ ಜೈಲು ಅಧಿಕಾರಿಗಳ ಮುಂದೆ ಅಲವತ್ತು ಕೊಳ್ಳುತ್ತಿದ್ದಾರೆ.
ದರ್ಶನ್ ಮೇಲೆ ನನಗೆ ಅತಿಯಾದ ಅಭಿಮಾನ. ಅವರಿಷ್ಟಪಟ್ಟರೆ ನಾನು ಮದುವೆಯಾಗಲೂ ಸಿದ್ಧ. ವಿಜಯಲಕ್ಷ್ಮಿ ಒಬ್ಬರೇ ಹೆಂಡತಿಯಲ್ಲ, ನಾನೂ ಕೂಡ ದರ್ಶನ್ ಪತ್ನಿ ಇದ್ದಂತೆ ಎಂದು ಹೇಳಿ ರಂಪಾಟ ಮಾಡಿದ್ದಾರೆ.
ನಾನು ಗುಲ್ಬರ್ಗದ ಮೂಲದವಳು. ಬೆಂಗಳೂರಿನ ಆರ್.ಆರ್.ನಗರದಲ್ಲಿದ್ದೆ. ದರ್ಶನ್ ಜೈಲಿಗೆ ಹೋದ ದಿನದಿಂದ ಅವರ ಭೇಟಿಗಾಗಿ ಸತತ ಪ್ರಯತ್ನ ಮಾಡುತ್ತಿದ್ದೇನೆ. ಪೊಲೀಸರು ಒಳಗೆ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ದರ್ಶನ್ ನೋಡದ ಹೊರತು ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಮೊಂಡಾಟ ಮಾಡಿದರು.
ದರ್ಶನ್ರನ್ನು ನೋಡಬೇಕೆಂಬ ಆಸೆ ತುಂಬಾ ಜನಕ್ಕೆ ಇರುತ್ತದೆ. ಬರುವವರಿಗೆ ಅವಕಾಶ ಮಾಡಿಕೊಡಬೇಕು. ಈ ಹಿಂದೆ ನಾನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೆ. ಅಲ್ಲಿಯೂ ಭೇಟಿಯಾಗಲಿಕ್ಕಾಗಲಿಲ್ಲ. ಹೀಗಾಗಿ ಬಳ್ಳಾರಿಗೆ ಬಂದಿದ್ದೇನೆ. ನಾನು ಅವರೊಂದಿಗೆ ಮಾತನಾಡದೇ ಇದ್ದರೂ ಪರವಾಗಿಲ್ಲ, ನೋಡಲು ಅವಕಾಶ ಕೊಡಿ. ನಾನು ಹಣ್ಣುಹಂಪಲುಗಳನ್ನು ಮಾತ್ರ ತಂದಿದ್ದೇನೆ. ದರ್ಶನ್ ಇಷ್ಟಪಟ್ಟರೆ ಚಿಕನ್, ಮಟನ್ ಕೂಡ ತಂದುಕೊಡುತ್ತೇನೆ ಎಂದು ಹೇಳಿದರು.
Previous Articleದರ್ಶನ್ ಕೇಸ್ ನಲ್ಲಿ ಯಾರ Role ಏನು ಗೊತ್ತಾ.
Next Article ಬೆಂಗಳೂರು ಮುಕುಟಕ್ಕೆ ಮತ್ತೊಂದು ಗರಿ