ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಮತ್ತು ಈಗಿನ ಅಧ್ಯಕ್ಷರಾದ ಜೋ ಬೈಡೆನ್ ತಮ್ಮ ಜೀವಿತಾವಧಿಯಲ್ಲಿ ಮದ್ಯ ಸೇವನೆ ಮಾಡಿಯೇ ಇಲ್ಲ ಎಂದರೆ ನಂಬುತ್ತೀರಾ? ನಂಬಲೇಬೇಕು. ಪಾಶ್ಚಾತ್ಯರಲ್ಲಿ ಅದೂ ಸಾರ್ವಜನಿಕ ಬದುಕಿನಲ್ಲಿರುವ ಪ್ರಭಾವಿ ವ್ಯಕ್ತಿಗಳಲ್ಲಿ ಮದ್ಯ ಸೇವನೆ ಚಟವಲ್ಲದೆ ಇದ್ದರೂ ಅದು ಅವರ ಸಂಸ್ಕೃತಿಯ ಭಾಗವಾಗಿ ಬಂದುಬಿಟ್ಟಿದೆ. ಪ್ರತಿಷ್ಠಿತರು ದುಬಾರಿ ಮದ್ಯ ಸೇವಿಸುವುದು ಎಲ್ಲಾ ಖಾಸಗಿ ಕಾರ್ಯಕ್ರಮಗಳಲ್ಲಿ ಮದ್ಯ ಸೇವಿಸುವುದು ಇದೆಲ್ಲ ನೋಡಿ ಪಾಶ್ಚಾತ್ಯರೆಲ್ಲರೂ ಮದ್ಯ ಸೇವಿಸುತ್ತಾರೆ ಎನ್ನುವ ಭಾವನೆ ಜನರಲ್ಲಿದೆ. ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಮದ್ಯ ಸೇವನೆಯ ಬಗ್ಗೆ ಕೆಟ್ಟ ಅಭಿಪ್ರಾಯವಿಲ್ಲ. ವಯಸ್ಕರು ಮದ್ಯ ಸೇವಿಸಿದರೆ ತಪ್ಪೇನಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಆದರೆ ಡೊನಾಲ್ಡ್ ಟ್ರಂಪ್ ನಂಥ ಪ್ರಸಿದ್ಧ ವ್ಯಕ್ತಿ ಜನಪ್ರಿಯರಾಗಿದ್ದು ಅತ್ಯಂತ ಐಷಾರಾಮಿ ಸಾಮಾಜಿಕ ವರ್ತುಲಗಳಲ್ಲಿ ಕಾಣಿಸಿಕೊಂಡರೂ ಅವರು ಮದ್ಯ ಸೇವನೆ ಮಾಡುವುದೇ ಇಲ್ಲ ಎನ್ನುವುದು ಅನೇಕರ ಹುಬ್ಬೇರಿಸುವಂತೆ ಮಾಡಿದೆ. ಅವರಿಗೆ ಸಣ್ಣ ವಯಸ್ಸಿನಿಂದಲೇ ಮದ್ಯದ ಬಗ್ಗೆ ಆಸಕ್ತಿ ಇಲ್ಲವಂತೆ ಮತ್ತು ಅವರ ಒಬ್ಬ ಸಹೋದರ ಮದ್ಯ ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದು ಅವರ ಮೇಲೆ ದೊಡ್ಡ ಪರಿಣಾಮ ಬೀರಿದೆಯಂತೆ. ತಾನು ಮದ್ಯ ಸೇವಿಸದೇ ಇರುವುದು ತನಗೂ ಒಳ್ಳೆಯದು ತನ್ನೊಂದಿಗಿರುವ ಬೇರೆಯವರಿಗೂ ಒಳ್ಳೆಯದು ಎಂದು ಟ್ರಂಪ್ ಅನೇಕ ಬಾರಿ ತಮಾಷೆ ಮಾಡಿದ್ದಾರೆ. ಹಾಗೇ ಹಾಲಿ ಅಧ್ಯಕ್ಷರಾದ ಬೈಡೆನ್ ಕೂಡ ತಮ್ಮ ಸುದೀರ್ಘ ಜೀವನದಲ್ಲಿ ಮದ್ಯವನ್ನು ಎಂದೂ ಸೇವಿಸಿಯೇ ಇಲ್ಲ ಎಂದು ಹೇಳಿರುವುದು ಕೂಡ ಅನೇಕರಲ್ಲಿ ಆಶ್ಚರ್ಯ ಮೂಡಿಸಿದರೂ ಅದು ನಂಬಲೇ ಬೇಕಾದ ಸತ್ಯವೆಂದು ಬೈಡೆನ್ ಅವರನ್ನು ಬಲ್ಲವರು ಹೇಳುತ್ತಾರೆ.
ಟ್ರಂಪ್ ಮತ್ತು ಬೈಡೆನ್ ಎಷ್ಟು ಕುಡಿಯುತ್ತಾರೆ ಗೊತ್ತಾ?
Previous Articleಬಾರ್ ಲೈಸೆನ್ಸ್ ಗೆ ಲಂಚ-ಲೋಕಾಯುಕ್ತಕ್ಕೆ ದೂರು.
Next Article 16 ವರ್ಷಕ್ಕಿಂತ ಕಿರಿಯ ಮಕ್ಕಳು Social Media ಬಳಸುವಂತಿಲ್ಲ