ಜಗತ್ತಿನ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ಟ್ವಿಟರ್ ಖರೀದಿಸಿರುವ ಎಲಾನ್ ಮಸ್ಕ್,ಇದೀಗ ಕಂಪೆನಿಯಲ್ಲಿ ಹಲವಾರು ಬದಲಾವಣೆಗೆ ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖವಾಗಿ ಭಾರತೀಯ ಮೂಲದ ಮುಖ್ಯಸ್ಥನ ಎತ್ತಂಗಡಿ ಹಾಗು ಬಳಕೆದಾರರಿಗೆ ಶುಲ್ಕ. ಎಲಾನ್ ಮಸ್ಕ್ ಟ್ವಿಟರ್ ನ ಬಹುಪಾಲು ಷೇರು ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ ಅವರು ಇದೀಗ ಆ ಕಂಪನಿಯ ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ್ದಾರೆ. ಮುಂದೆ ಟ್ವಿಟರ್ ಬಳಕೆ ಉಚಿತವಾಗಿ ಸಿಗುವುದಿಲ್ಲ ಎಂಬರ್ಥದಲ್ಲಿ ಮಸ್ಕ್ ಟ್ವೀಟಿಸಿದ್ದಾರೆ.
ಜೊತೆಗೆ ಅಮೆರಿಕಾ ಮೂಲದ ತಂತ್ರಜ್ಞಾನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದ ಭಾರತದ ನೆಲದಿಂದ ಆಯ್ಕೆಯಾದ ಪ್ರತಿಭೆ ಪರಾಗ್ ಅಗರ್ವಾಲ್ ಅವರನ್ನು ಬದಲಾಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ ಬಳಕೆದಾರರಿಗೆ ಶುಲ್ಕ ಕೂಡಾ ವಿಧಿಸುವ ಸಾಧ್ಯತೆಯಿದೆ. ಎಲಾನ್ ಮಸ್ಕ್ ತಮ್ಮ ಟ್ವೀಟ್ ನಲ್ಲಿ ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಎಂದಿನಂತೆ ಉಚಿತವಾಗಿಯೇ ಇರಲಿದೆ ಎಂದಿದ್ದು ವಾಣಿಜ್ಯ ಮತ್ತು ಸರ್ಕಾರದ ಬಳಕೆದಾರರಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದಿದ್ದಾರೆ. ಈ ಮೂಲಕ ಟ್ವಿಟರ್, ಪಾವತಿಸಿ ಬಳಸಬಹುದಾದ ಸಾಮಾಜಿಕ ಮಾಧ್ಯಮವಾಗಲಿದೆ.
Previous Articleನಾಲ್ಕನೇ ಸ್ಥಾನಕ್ಕೆ ನೆಗೆದ ಆರ್‌ಸಿಬಿ
Next Article ಮಾವಿನಹಣ್ಣಿಗೂ ಬಂತು ಬುಕ್ಕಿಂಗ್