ಬೆಂಗಳೂರು, ಮೇ.9-ಅಂತರಾಜ್ಯ ಗಾಂಜಾ ಮಾರಾಟಗಾರನೊಬ್ಬನನ್ನು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಶೇಷಾದ್ರಿಪುರಂ ಪೊಲೀಸರು 20 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಡಿಶಾದ ಕಂದಲಾಲ್ ಕುಲ್ವಾನಿಯ ಶ್ಯಾಮಾನಂದ್ ದಿಗಲ್ (35)ಬಂಧಿತ ಆರೋಪಿಯಾಗಿದ್ದಾನೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ ಲಗೇಜ್ ಬ್ಯಾಗ್‍ಗಳಲ್ಲಿ ಇಟ್ಟುಕೊಂಡಿದ್ದ ತಲಾ 2 ಕೆ.ಜಿ. ತೂಕದ ಪೊಟ್ಟಣಗಳಲ್ಲಿ ಕಟ್ಟಿದ್ದ 20 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಕುಮಾರಪಾರ್ಕ್ ಪಶ್ಚಿಮದ ಸುಬ್ರಮಣ್ಯಸ್ವಾಮಿ ದೇವಾಲಯದ ಆರ್ಚ್ ಬಳಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಆರೋಪಿಯು ಗಾಂಜಾವನ್ನು ಇಟ್ಟುಕೊಂಡು ಮಾರಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ
ಶೇಷಾದ್ರಿಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಸ್.ರವಿ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆಯಲ್ಲಿ ಆರೋಪಿಯು ಹಿಂದೆ ಎರಡು-ಮೂರು ಬಾರಿ ನಗರಕ್ಕೆ ವಂದು ಗಾಂಜಾವನ್ನು ರಫೀಕ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದರು.
Previous Articleಪೆಟ್ರೋಲ್ ಬಾಂಬ್ ಸಂಗ್ರಹಿಸಿ ಗಲಭೆಗೆ ಸಂಚು
Next Article ವರ್ತೂರು ನಾಲಿಗೆ ಅಶುದ್ಧ