ಬೆಳಗಾವಿ,ಮೇ.16- ಒಡ ಹುಟ್ಟಿದ ತಮ್ಮನ ಏಳಿಗೆಯನ್ನೇ ಸಹಿಸದ ಪಾಪಿ ಅಣ್ಣನೊಬ್ಬ ಆತನ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಗೋಕಾಕ್ ತಾಲೂಕಿನ ಶಿಂಗಳಾಪುರ ಗ್ರಾಮದಲ್ಲಿ ನಡೆದಿದೆ.
ಶಿಂಗಳಾಪುರ ಗ್ರಾಮದ ಮಾಳಪ್ಪ ಭೀಮಪ್ಪ ಚಳಾಯಿ (33) ಕೃತ್ಯ ನಡೆಸಿದ ಆತನ ಅಣ್ಣ ವಾಶಪ್ಪ ಭೀಮಪ್ಪ ಚಳಾಯಿಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಒಡ ಹುಟ್ಟಿದ ತಮ್ಮ ಜಮೀನಿನಲ್ಲಿ ದುಡಿದು ಶ್ರೀಮಂತನಾಗುತ್ತಿರುವುದನ್ನು ಕಂಡು ಹೊಟ್ಟೆ ಕಿಚ್ಚಿನಿಂದ ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ ಊರಲ್ಲಿನ ಜಮೀನಲ್ಲದೇ, ಪ್ರಭಾ ಶುಗರ್ಸ್ ಒಡೆತನದ ಜಮೀನನ್ನು ಪಡೆದು ಪಾಲುದಾರಿಕೆ ಮೂಲಕ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿ ಟ್ರಾಕ್ಟರ್, ಕಾರು ಖರೀದಿ ಜೊತೆಗೆ ಊರಲ್ಲಿ ಹೆಸರು ಮಾಡಿಕೊಂಡಿದ್ದನು. ಇದನ್ನ ಸಹಿಸಲಾಗದೆ ಆತನ ಅಣ್ಣ ವಾಶಪ್ಪ ತಮ್ಮನ ಮೇಲೆ ದ್ವೇಷ ಸಾಧಿಸುತ್ತಿದ್ದ. ಇದರಿಂದ ಆಗಾಗ ತಮ್ಮನ ಮೇಲೆ ಗಲಾಟೆ ಮಾಡುತ್ತಿದ್ದು ಸಂಚು ಮಾಡಿಕೊಂಡು ಸ್ಥಳಕ್ಕೆ ಬಂದಿದ್ದ ವಾಶಪ್ಪ ಮಾಳಪ್ಪನ ಎದೆಯ ಮೇಲೆ ಕಲ್ಲು ಹಾಕಿ ಬಳಿಕ ಅದೇ ಕಲ್ಲಿನಿಂದ ಚುಚ್ಚಿದ್ದಾನೆ. ನಂತರ ಹಾರೆಕೋಲು ಮೂಲಕ ಮನಸ್ಸೋಯಿಚ್ಛೆ ಎಲ್ಲೆಂದರಲ್ಲಿ ಹೊಡೆದು ಕೊಲೆಗೈದಿದ್ದಾನೆ. ಇತ್ತ ಕೊಲೆ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಣ್ಣನನ್ನು ಜೈಲಿನಿಂದ ಬಿಡುಗಡೆ ಮಾಡಬೇಡಿ ಅವನಿಂದ ನಮಗೂ ಜೀವಬೇದರಿಕೆ ಇದೆ ಎಂದು ಹೇಳುತ್ತಿದ್ದಾರೆ. ಘಟನೆ ಕುರಿತಂತೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ