ರಾಮನಗರ : ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಶಾಂತಿ ಕದಲಿಸುವ ಕೆಲಸ ಮಾಡುತ್ತಿದ್ದಾರೆ. ಶಾಂತಿ ಕದಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ಶಾಂತಿ ಬೇಡವೆಂದರೆ ಅವ್ರು ಹೇಳುವುದು ಸರಿ. ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದಿನಿಂದ ಚಾಲಿಸ್ ಪಠಣಾ ವಿವಾದಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ ನಮ್ಮ ನಾಡು ಎಂದಿಗೂ ದ್ವೇಷ ಬಯಸುವುದಿಲ್ಲ. ಇದು ಶಾಂತಿ ಬಯಸುವ ನಾಡು. ಈ ಸರ್ಕಾರದಿಂದ ಪದೇ ಪದೇ ಕೋಮು ಗಲಭೆಗೆ ಪ್ರಚೋದನೆ ನೀಡುವ ಪಿತೂರಿ ನಡೆಯುತ್ತಿದೆ. ಈಗಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೇಲೆ ಕ್ರಮ ಕೈಗೊಳಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಶ್ರೀರಾಮ ಸೇನೆ ಹಾಗೂ ಬಿಜೆಪಿ ಅವರು ಅಣ್ಣ ತಮ್ಮಂದಿರು. ಅವ್ರು ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಆಶಾಂತಿ ಮೂಡಿಸುವ ವಾತಾವರಣ ಸೃಷ್ಟಿಯಾಗುತ್ತಿದೆ. ಈ ರಾಜ್ಯದಲ್ಲಿ ಎಲ್ಲಾ ಭಾಷೆಯ ವಾಸವಾಗಿದ್ದಾರೆ. ಆದ್ರೆ ಈಗ ಚುನಾವಣಾ ದೃಷ್ಟಿಯಿಂದ ಅಶಾಂತಿ ಉಂಟು ಮಾಡುತ್ತಿದ್ದಾರೆ. ತಕ್ಷಣವೇ ಸರ್ಕಾರ ಕ್ರಮ ವಹಿಸಬೇಕು. ಇಲ್ಲವಾದರೆ ರಾಜ್ಯಪಾಲರು ಆಡಳಿತ ನಡೆಸಬೇಕೆಂದು ಸಂಸದ ಡಿ.ಕೆ. ಸುರೇಶ್ ಒತ್ತಾಯಿಸಿದರು.
ಗಲಭೆ ಹಿಂದೆ ಸರ್ಕಾರದ ಇದೆ – ನೇರವಾಗಿ ಈ ಗಲಭೆಯ ಹಿಂದೆ ಸರ್ಕಾರವೇ ಇದೆ. ರಾಜ್ಯದಲ್ಲಿ ನಡೆಯುತ್ತಿರುವ ಪಿತೂರಿಯನ್ನ ತಡೆಯುವ ಮುಖ್ಯಮಂತ್ರಿ ಶಾಂತಿಭಂಗ ತರುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಶಾಂತಿ ಭಂಗ ತರುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹೀಗಾಗಿ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೊಂಬೆನಗರಿ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆ – ಚನ್ನಪಟ್ಟಣದಲ್ಲಿ ಯಾವಾಗಲು ಪಕ್ಷ ಸಂಘಟನೆ ನಡೆಯುವಂತಹ ಪ್ರಕ್ರಿಯೆಯಾಗಿದೆ. ಇದು ನಮ್ಮ ಕರ್ತವ್ಯವಾಗಿದೆ. ಇದು ಅಭ್ಯರ್ಥಿ ವಿಚಾರವಾಗಿ ಸಭೆ ಅಲ್ಲ. ಪಕ್ಷದ ಸಂಘಟನೆ ವಿಚಾರವಾಗಿ ಸಭೆ ಆಯೋಜನೆ ಮಾಡಿಕೊಂಡಿದ್ದೇವೆ. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ.
ಹೀಗಾಗಿ ಕಾರ್ಯಕರ್ತರ ಹಾಗು ಮುಖಂಡರ ಅನಿಸಿಕೆ ಚರ್ಚೆಗಾಗಿ ಸಭೆ ಕರೆದಿದ್ದೇನೆ. ಮೂರು ತಾಲೂಕಿನಲ್ಲೂ ಅಭ್ಯರ್ಥಿ ಇರುವ ವಿಚಾರವಾಗಿ ಮಾತ್ರವಲ್ಲ ಎಂದರು.
ರಾಜ್ಯದ 224 ಕ್ಷೇತ್ರದಲ್ಲೂ ಸಹ ಯಾವ ಅಭ್ಯರ್ಥಿ ಇಲ್ಲ. ಅಭ್ಯರ್ಥಿ ಪಟ್ಟಿ ಪ್ರಕಟಗೊಂಡಾಗ ಮಾತ್ರ ಅವರು ಅಭ್ಯರ್ಥಿಗಳಾಗುತ್ತಾರೆ. ಆದ್ರೆ ಈಗ ಎಲ್ಲರೂ ನಾಯಕರಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಅಷ್ಟೇ. ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆಧ್ಯತೆ ನೀಡುತ್ತೇವೆ ಎಂದು ಸಂಸದ ಡಿ.ಕೆ. ಸುರೇಶ್ ಇದೇ ವೇಳೆ ತಿಳಿಸಿದರು.