ಬೆಂಗಳೂರು, ಸೆ.15-ರ್ರೋಲೆಕ್ಸ್,
ಹ್ಯೂಬ್ಲೋಟ್,ಪೊಲೀಸ್,ಡೀಸೆಲ್,ಇನ್ನಿತರ ದುಬಾರಿ ಬೆಲೆಯ ನಕಲಿ ವಾಚ್ ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಖದೀಮನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಾಜಿನಗರದ ಸೈಯದ್ ಅಹಮದ್ ಬಂಧಿತ ಆರೋಪಿಯಾಗಿದ್ದಾನೆ.ಆತನಿಂದ ದುಬಾರಿ ಬೆಲೆಯ 83 ನಕಲಿ ವಾಚುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.
ವಶಪಡಿಸಿಕೊಂಡ ನಕಲಿ ವಾಚ್ ಗಳ ಅಸಲಿ ಮೌಲ್ಯ 4ಕೋಟಿ 32 ಲಕ್ಷ 75 ಸಾವಿರ ರೂಗಳಾಗಿದ್ದು ಆರೋಪಿಯ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ಆರೋಪಿಯು ಮುಂಬಯಿಯ ಕೀಮಾರಾಮ್ ಪುರೋಹಿತ್,ಜಗದೀಶ್ ಹಾಗೂ ಶಫೀಖಾನ್ ಎಂಬುವವರಿಂದ ದುಬಾರಿ ಬೆಲೆಯ ನಕಲಿ ವಾಚ್ ಗಳನ್ನು ತಂದು ಶಿವಾಜಿನಗರದ ಹೆಚ್ ಕೆಪಿ ರಸ್ತೆಯ ಬಳಿ ಮಾರಾಟ ಮಾಡಲು ಯತ್ನಿಸಿದಾಗ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ