ನಟ ಕಿರಣ್ ರಾಜ್ ಸ್ಥಿತಿ ಗಂಭೀರ.
ಬೆಂಗಳೂರು, ಸೆ.11-
ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆ ಭಾಗಕ್ಕೆ ಗಂಭೀರವಾದ ಪೆಟ್ಟಾಗಿದ್ದು ಕೆಂಗೇರಿ ಬಳಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಕಿರಣ್ ರಾಜ್
ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ವಾಪಾಸು ಬರುವಾಗ ಅವರು ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರೂ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ದುಬಾರಿ ಕಾರು ಜಖಂ ಗೊಂಡಿದೆ.
ಡ್ರೈವ್ ಮಾಡುತ್ತಿದ್ದ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರ ಜೊತೆ ಕಾರಿನಲ್ಲಿದ್ದ ಕಾರ್ಯಕಾರಿ ನಿರ್ಮಾಪಕ ಸೀಟ್ ಬೆಲ್ಟ್ ಹಾಕಿದ್ದ ಕಾರಣ ಬಚಾವ್ ಆಗಿದ್ದಾರೆ.ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಅಪಘಾತ ಸಂಭವಿಸಿದೆ.
ಕಿರಣ್ ರಾಜ್ ಬಳಿ ಇದ್ದಿದ್ದು ಕಪ್ಪು ಬಣ್ಣದ ಮರ್ಸಿಡಿಸ್-ಬೆನ್ಜ್ ಕಾರು. ಸಾಮಾನ್ಯವಾಗಿ ಭಾರತದಲ್ಲಿ ಈ ಕಾರುಗಳ ಬೆಲೆ 45 ಲಕ್ಷ ರೂಪಾಯಿಗಳಿಂದ ಆರಂಭವಾಗಿ 3 ಕೋಟಿಯವರೆಗೂ ಇದೆ. ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಫೋಟೋ ವೈರಲ್ ಆಗುತ್ತಿದೆ.