ನವದೆಹಲಿ- ಸತ್ತ ಮೇಲೆ ತನ್ನ ಮೃತ ದೇಹ ಎನಾಗಲಿದೆ ಎಂಬುದು ಸತ್ತ ವ್ಯಕ್ತಿಗೆ ಹೇಗೆ ತಿಳಿಯುತ್ತದೆ.ತಾನೇ ಸತ್ತ ಮೇಲೆ ಮೃತ ದೇಹ ಎನಾದರೇನಂತೆ ಆದರೆ ಇಲ್ಲೊಂದು ವಿಚಿತ್ರ ಪ್ರಕರಣವಿದೆ ಅದು ಎನು ಅಂತಾ ಗೊತ್ತಾಗಬೇಕಾದರೆ ಈ ಸ್ಟೋರಿ ಪೂರ್ತಿಯಾಗಿ ನೋಡಿ ನಿಮ್ಮ ಸ್ನೇಹಿತರಿಗೂ ಷೇರ್ ಮಾಡಿ ಹಾಗೆ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡೋದು ಮರೀಬೇಡಿ.
ನವದೆಹಲಿಯ 56 ವರ್ಷ ವಯಸ್ಸಿನ ಕುಂಜ್ ಬಿಹಾರಿ ಬನ್ಸಲ್ ಎಂಬ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ ಒಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ ಅದೇನೆಂದರೆ ನಾನು ಸತ್ತಮೇಲೆ ಅಂತ್ಯಸಂಸ್ಕಾರದ ವಿಧಿಗಳನ್ನು ಪೂರೈಸಲು ಕುಟುಂಬದ ಸದಸ್ಯರಿಗೆ ಅನುಮತಿ ನೀಡಬಾರದು.ಅಷ್ಟೇ ಅಲ್ಲ ಅವರಾರು ನನ್ನ ಶವ ಮುಟ್ಟಬಾರದು. ಪತ್ನಿ, ಮಗಳು, ಅಳಿಯ ಯಾರಿಗೂ ಈ ಅಧಿಕಾರ ನೀಡಬಾರದು, ನನ್ನ ಅಂತ್ಯಕ್ರಿಯೆ ಅವರು ನಡೆಸಕೂಡದು ಎಂಬುದಾಗಿ ಆದೇಶಿಸಿ’ ಎಂದು ಮನವಿ ಮಾಡಿದ್ದಾರೆ.ನನಗೆ ಹೃದ್ರೋಗ ಇದೆ. ಯಾವಾಗ ಬೇಕಾದರೂ ಸಾಯಬಹುದು. ಆದರೆ ನನ್ನ ಮಗಳು, ಅಳಿಯ ಹಾಗೂ ಪತ್ನಿ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ನಾನು ಸತ್ತ ಮೇಲೆ ನನ್ನ ಮಕ್ಕಳು ಅಂತ್ಯಕ್ರಿಯೆ ಮಾಡಬಾರದು ಎಂದಿದ್ದಾರೆ.
ಅಂದ ಹಾಗೆ ಇದಕ್ಕೆ ಕಾರಣ ಎನು ಗೊತ್ತಾ..
ಮಗಳ ಲಾಲನೆ-ಪೋಷಣೆಯಲ್ಲಿ ಭಾಗಿಯಾಗುವ ಅವಕಾಶವನ್ನು ಪತ್ನಿ ಯಾವತ್ತೂ ತನಗೆ ನೀಡಲಿಲ್ಲ, ಅವಳ ಮದುವೆಗೂ ಆಹ್ವಾನಿಸದ ಮಟ್ಟಿಗೆ ತನ್ನನ್ನು ಕಡೆಗಣಿಸಲಾಯಿತು. ಮಗಳಾಗಲೀ, ಅಳಿಯನಾಗಲೀ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ಅವರಿಗೆ ನನ್ನ ಅಂತ್ಯಕ್ರಿಯೆ ನಡೆಸುವ ಅಧಿಕಾರ ಇಲ್ಲ. ಆದರೆ ನಾನು ಮಗನಂತೆ ನೋಡಿಕೊಳ್ಳುತ್ತಿರುವ ಹಾಗೂ ನನ್ನನ್ನು ಅಪ್ಪನಂತೆ ಸಲಹುತ್ತಿರುವ ಕ್ರಿಷ್ ಎಂಬ ಯುವಕನಿಗೆ ನನ್ನ ಅಂತ್ಯಕ್ರಿಯೆಯ ಸರ್ವ ಅಧಿಕಾರ ನೀಡಬೇಕು. ಈ ರೀತಿ ಆದೇಶಿಸಿ’ ಎಂದು ಅವರು ಕೋರಿದ್ದಾರೆ.ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಇದೇನಿದು ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ.