ಮುಂಬಯಿ: ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವ ಗುಜರಾತ್ ಟೈಟಾನ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸುಲಭವಾಗಿ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದ ಗುಜರಾತ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸಾಯಿ ಸುದರ್ಶನ್ 65 ರನ್ ಗಳಿಸಿದರು. ಮಿಕ್ಕ ಆಟಗಾರರು ಕ್ರೀಸ್ ಗೆ ಆಂಟಿಕೊಳ್ಳದ ಕಾರಣ, ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 148 ರನ್ ಗಳಿಸಿತು. ರಬಾಡ 4 ವಿಕೆಟ್ ಕಿತ್ತರು.
ಉತ್ತರವಾಗಿ ಪಂಜಾಬ್ ಕೇವಲ 16 ಓವರ್ ಗಳಲ್ಲಿ ಗುರಿ ತಲುಪಿತು. ಆರಂಭಿಕ ಶಿಖರ್ ಧವನ್ ಆಜೆಯ 65, ಭಾನುಕ ರಾಜಪಕ್ಷೆ 40, ಲಿಯಂ ಲಿವಿಂಗ್ ಸ್ಟೋನ್ ಕೇವಲ 10 ಎಸೆತಗಳಲ್ಲಿ 30 ರನ್ ಗಳಿಸಿ, ತಂಡಕ್ಕೆ 8 ವಿಕೆಟ್ ಗಳ ಗೆಲುವನ್ನು ತಂದುಕೊಟ್ಟರು.