ಇಲ್ಲ ಸಲ್ಲದ ಸಬೂಬುಗಳನ್ನು ಕೊಟ್ಟುಕೊಂಡು ಯುಕ್ರೇನ್ ದೇಶದ ಮೇಲೆ ದಾಳಿ ಮಾಡಿ ಆ ದೇಶದ ಜನರ ಜೀವನವನ್ನು ಅಲ್ಲೋಲಕಲ್ಲೋಲ ಮಾಡುವುದರೊಂದಿಗೆ ವಿಶ್ವದಲ್ಲೇ ಶಾಂತಿಯನ್ನು ಕದಡಿ ಹಾಕಿದ ರಷ್ಯಾದ ಅಧ್ಯಕ್ಷ ಪುಟಿನ್ ಈಗ ಕ್ಯಾನ್ಸರ್ ರೋಗದಿಂದಾಗಿ ಸರ್ಜರಿ ಮಾಡಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಒಂದೆರಡು ಕಾರ್ಯಕ್ರಮಗಳಲ್ಲಿ ಟಿವಿಯಲ್ಲಿ ಕಾಣಿಸಿಕೊಂಡ ಪುಟಿನ್ ಅವರನ್ನು ಕಂಡ ಜನ ಈ ಮನುಷ್ಯನಲ್ಲಿ ಏನೋ ಸರಿ ಇದ್ದಂತೆ ಕಾಣುತ್ತಿಲ್ಲ ಎನ್ನತೊಡಗಿದ್ದರು. ಅದು ಈಗ ಸತ್ಯವಾಗಿದೆ. ಒಬ್ಬ ಉನ್ನತ ಮಟ್ಟದ ಅಧಿಕಾರಿಯನ್ನು ಭೇಟಿಮಾಡಿದ ಸಂದರ್ಭದಲ್ಲಿ ಪುಟಿನ್ ತಮ್ಮ ಮುಂದೆ ಇದ್ದ ಟೇಬಲ್ಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು ಮಾತ್ರವಲ್ಲದೆ ಬಲ ಪಾದವನ್ನು ಮೇಲೆ ಕೆಳಗೆ ಮಾಡುತ್ತಿದ್ದದನ್ನು ನೋಡಿದ ತಜ್ಞರು ಪುಟಿನ್ ಗೆ ಖಂಡಿತವಾಗಿ ಏನೋ ಕಾಯಿಲೆ ಇದೆ ಎಂದು ಹೇಳಿದ್ದರು. ಹಾಗೇ ಇತ್ತೀಚಿಗೆ ಪುಟಿನ್ ಅವರ ಮುಖ ಊದಿಕೊಂಡಂತೆ ಕಾಣುತ್ತಿರುವುದರಿಂದ ಪುಟಿನ್ ಒಂದೋ ಮುಖದಲ್ಲಿ ವೃದ್ದಾಪ್ಯವನ್ನು ಮರೆಮಾಚಲು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಇಲ್ಲ ಮುಖದ ತುಂಬೆಲ್ಲ ವಯಸ್ಸು ಮಾಚುವ ಇಂಜೆಕ್ಷನ್ ಗಳನ್ನು ಕೊಡಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಅವರ ಇತ್ತೀಚಿನ ಕೆಲವು ಫೋಟೋಗಳನ್ನು ನೋಡಿದ ಆಸ್ಟ್ರೇಲಿಯಾದ ಓರ್ವ ವೈದ್ಯ ಪುಟಿನ್ ರಾಸಾಯನಿಕಗಳನ್ನು ತುಂಬಿಸಿಕೊಂಡು ಊದಿಕೊಂಡ ಬೆಕ್ಕಿನಂತಾಗಿದ್ದರೆ ಎಂದಿದ್ದರು. ೨೦೨೦ ರಲ್ಲೇ ಪುಟಿನ್ ಗೆ ಗಂಟಲಿನ ಥೈರೊಯ್ಡ್ ನ ಕ್ಯಾನ್ಸರ್ ಇದೆ ಎಂದು ಹೇಳಲಾಗಿತ್ತು. ಅದು ಉಲ್ಬಣವಾಗಿ ಈಗ ಪುಟಿನ್ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಾತಾಡುತ್ತಿದ್ದಾಗ ವಿಪರೀತ ಕೆಮ್ಮಲು ಆರಂಭಿಸಿದ ಪುಟಿನ್ ಅವರನ್ನು ನೋಡಿದವರು ಇದು ಖಂಡಿತವಾಗಿಯೂ ಹದಗೆಟ್ಟ ಆರೋಗ್ಯದ ಫಲ ಎಂದಿದ್ದರು. ಪುಟಿನ್ ಶಸ್ತ್ರಚಿಕಿತ್ಸೆಗೆ ಒಳಪಡುವಾಗ ಅವರ ನಂಬಿಕೆಯ ಆಪ್ತ ಅವರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎನ್ನಲಾಗಿದೆ.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
