ಜೂನ್ ಮಧ್ಯದಿಂದ ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ತೀವ್ರ ಮಳೆ ಮತ್ತು ಪ್ರವಾಹದಿಂದ 348 ಮಕ್ಕಳು ಸೇರಿದಂತೆ ಕನಿಷ್ಠ 1,033 ಜನರು ಸಾವನ್ನಪ್ಪಿದ್ದಾರೆ ಮತ್ತು 1,527 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 119 ಜನರು ಸಾವನ್ನಪ್ಪಿದ್ದಾರೆ ಮತ್ತು 71 ಜನರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ.
ಕನಿಷ್ಠ ಕೋಟಿ ಜನರು ಜನರು ದುರಂತದಿಂದ ಬಳಲುತ್ತಿದ್ದಾರೆ ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಶೆರಿ ರೆಹಮಾನ್ ಗುರುವಾರ ಹೇಳಿದ್ದಾರೆ. ಅವರು ಪ್ರವಾಹವನ್ನು “ಅಭೂತಪೂರ್ವ” ಮತ್ತು “ಈ ದಶಕದ ಅತ್ಯಂತ ಕೆಟ್ಟ ಮಾನವೀಯ ದುರಂತ” ಎಂದು ಕರೆದಿದ್ದಾರೆ.
“ಪಾಕಿಸ್ತಾನವು ತನ್ನ ಎಂಟನೇ ಮಾನ್ಸೂನ್ ಚಕ್ರವನ್ನು ಹಾದುಹೋಗುತ್ತಿದೆ ಆದರೆ ಸಾಮಾನ್ಯವಾಗಿ ದೇಶದಲ್ಲಿ ಕೇವಲ ಮೂರರಿಂದ ನಾಲ್ಕು ಚಕ್ರಗಳ ಮಳೆಯಾಗುತ್ತದೆ” ಎಂದು ರೆಹಮಾನ್ ಹೇಳಿದರು. “ಭಾರೀ ಪ್ರವಾಹ ಮತ್ತು ಕೊರೆತಗಳ ಈ ವಿಪತ್ತು ಆಘಾತಕಾರಿಯಾಗಿದೆ” ಎಂದಿದ್ದಾರೆ.
ಅವರು ನಿರ್ದಿಷ್ಟವಾಗಿ ದೇಶದ ದಕ್ಷಿಣದ ಮೇಲೆ ಪ್ರಭಾವವನ್ನು ಎತ್ತಿ ತೋರಿಸಿ ಅಲ್ಲಿ “ಗರಿಷ್ಠ” ಪರಿಹಾರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.