ಸಿಂಹಗಳ ದಾಳಿಗೆ ಬಲಿಯಾದ ವ್ಯಕ್ತಿಯ ಕೊನೆಯ ಕ್ಷಣಗಳನ್ನು ತೋರಿಸುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ವ್ಯಕ್ತಿಯು ಉಜ್ಬೇಕಿಸ್ತಾನ್‌ನ ಪಾರ್ಕೆಂಟ್‌ನಲ್ಲಿರುವ ಖಾಸಗಿ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹ ಗಳಿದ್ದ ಆವರಣವನ್ನು ಪ್ರವೇಶಿಸಿದನು ಎಂದು ವರದಿಯಾಗಿದೆ. ಆ ದುಸ್ಸಾಹಸ ಆತನ ಸಾವಿನಲ್ಲಿ ಅಂತ್ಯವಾಯಿತು.
ಸಿಂಹಗಳ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಯನ್ನು 44 ವರ್ಷದ ಎಫ್ ಐರಿಸ್ಕುಲೋವ್ ಎಂದು ಗುರುತಿಸಲಾಗಿದೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಆತ ಬೆಳಿಗ್ಗೆ 5 ಗಂಟೆಗೆ ಸಿಂಹಗಳ ಬೋನಿನೊಳಗೆ ಪ್ರವೇಶಿಸಿದನು.
ಆತನ ಕ್ಯಾಮರಾದಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಕಾಣುವಂತೆ ಆ ವ್ಯಕ್ತಿ ಬೀಗವನ್ನು ತೆರೆದು ಸಿಂಹಗಳ ಬಳಿಗೆ ಹೋಗುತ್ತಿರುವುದನ್ನು ನೋಡಬಹುದು. ಮೊದಲಿಗೆ, ಮೂರು ದೈತ್ಯ ಸಿಂಹಗಳು ಅವನ ಮೇಲೆ ದಾಳಿ ಮಾಡುವುದಿಲ್ಲ, ಆದರೆ ಕೆಲವು ಸೆಕೆಂಡುಗಳ ನಂತರ, ಅವು ಅವನ ಬಳಿಗೆ ಬರುತ್ತವೆ. ಅವು ಸುಮ್ಮನಿರುವಂತೆ ಹೇಳುವ ಆತ ಮೊದಲು ಆ ಸಿಂಹಗಳಲ್ಲಿ ಒಂದನ್ನು “ಸಿಂಬಾ” ಎಂದು ಕರೆಯುತ್ತಾನೆ.
ಸಿಂಹಗಳಿಂದ ಸುತ್ತುವರಿದಿದ್ದರೂ, ಐರಿಸ್ಕುಲೋವ್ ಆತ್ಮವಿಶ್ವಾಸದಿಂದ ತನ್ನ ಮುಖವನ್ನು ತೋರಿಸಲು ಕ್ಯಾಮೆರಾವನ್ನು ತಿರುಗಿಸುತ್ತಾನೆ. ಸಿಂಹಗಳಲ್ಲಿ ಪೈಕಿ ಒಂದು ಅವನ ಬಳಿಗೆ ಬಂದಾಗ, ಆ ಸಿಂಹ ತನಗೆ ಪರಿಚಯವಿದೆ ಎಂದು ತೋರಿಸಲು ಆತ ಅದನ್ನು ಮುಟ್ಟುತ್ತಾನೆ. ಆಗ ಒಂದು ಸಿಂಹ ಅವನ ಮೇಲೆ ದಾಳಿ ಮಾಡುವುದರೊಂದಿಗೆ ವೀಡಿಯೊ ಭಯಾನಕ ತಿರುವು ಪಡೆಯುತ್ತದೆ. ಆನಂತರ ಎಲ್ಲವೂ ಚಿತ್ರೀಕರಿಸಲ್ಪಡದಿದ್ದರೂ ಆತ ಚೀರಾಡುವುದು ಕೇಳಿಸುತ್ತದೆ. ಸಿಂಹಗಳು ಆತನ ಮುಖದ ಚರ್ಮವನ್ನು ಕಿತ್ತು ಹಾಕಿ ಅವನ ದೇಹದ ಕೆಲವು ಭಾಗಗಳನ್ನು ತಿಂದು ಬಿಡುತ್ತವೆ ಎಂದು ವರದಿಯಾಗಿದೆ. ಆಮೇಲೆ ರಕ್ಷಣೆಗೆ ಬಂದ ಮೃಗಾಲಯದ ನೌಕರರು ಒಂದು ಸಿಂಹವನ್ನು ಕೊಂಡು ಇನ್ನೆರಡಕ್ಕೆ ಅರಿವಳಿಕೆ ಔಷಧಿ ನೀಡಿ ಪ್ರಜ್ಞೆ ತಪ್ಪಿಸುವ ಹೊತ್ತಿಗೆ ಆ ವ್ಯಕ್ತಿ ಸತ್ತು ಹೋಗಿರುತ್ತಾನೆ.