ಕಲಬುರಗಿ ನಗರದ ಹೃದಯಭಾಗದಲ್ಲಿರುವ ಬಹಮನಿ ಕೋಟೆಯ ಈಶಾನ್ಯ ದಿಕ್ಕಿನಲ್ಲಿ ಸೋಮೇಶ್ವರ ದೇವಾಲಯವಿದೆ. ದೇವಸ್ಥಾನದ ಒಳಗಡೆ ಹಾಗೂ ಹೊರಭಾಗದಲ್ಲಿ ಕಲ್ಲು ಕಂಬಗಳ ಮೇಲೆ ಶಿವನ ಮೂರ್ತಿ, ನೃತ್ಯ ಮಾಡುವ ಸ್ತ್ರೀ ಶಿಲಾಬಾಲಿಕೆಗಳ ಕುರುಹುಗಳು ಪತ್ತೆಯಾಗಿವೆ. ಜೋತೆಗೆ ದೇವಸ್ಥಾನದ ಮುಂಭಾಗದಲ್ಲಿ ಪುಷ್ಕರಣಿ ಇರೋದು ಕೂಡಾ ಬೆಳಕಿಗೆ ಬಂದಿದೆ. ಹೀಗಾಗಿ ಇದೀಗ ಸ್ವಯಂಭೂ ಸೋಮಲಿಂಗೇಶ್ವರ ದೇವಸ್ಥಾನದ ಪುನಶ್ಚೇತನಕ್ಕಾಗಿ ಹಿಂದು ಜಾಗೃತಿ ಸೇನೆಯು ಪ್ರತಿಭಟನೆಗೆ ಮುಂದಾಗಿದೆ. ಇನ್ನೂ ಬಹಮನಿ ಸುಲ್ತಾನರ ದೊರೆ ಹಸನ್ ಗಂಗು ಷಾ – ಈ ಬಹಮನಿ ಕೋಟೆಯನ್ನು ನಿರ್ಮಿಸಿದ. ಸುಮಾರು 70 ಎಕರೆ ವಿಸ್ತೀರ್ಣದ ಬಹಮನಿ ಕೋಟೆಯೊಳಗೆ ಇದೀಗ ಸೋಮೇಲಿಂಗೇಶ್ವರ ದೇವಸ್ಥಾನವೂ ಕೂಡಾ ಪತ್ತೆಯಾಗಿದೆ. ಇತಿಹಾಸ ಪ್ರಸಿದ್ಧ ಬಹಮನಿ ಸುಲ್ತಾನರ ಆಳ್ವಿಕೆ ಕಾಲದಲ್ಲಿ ಕಟ್ಟಲಾದ ಬಹಮನಿ ಕೋಟೆಯೊಳಗೆ ಸ್ವಯಂ ಭೂ ಸೋಮಲಿಂಗೇಶ್ವರ ಮಂದಿರದ ಕುರುಹುಗಳು ಕಂಡು ಬಂದಿರುವುದರಿಂದ ಇದೀಗ ದೇವಸ್ಥಾನದ ಪುನಶ್ಚೇತನ ಮಾಡುವಂತೆ ಕೂಗು ಕೇಳಿ ಬರುತ್ತಿದೆ. ಜೋತೆಗೆ ಅದನ್ನು ಪುನಶ್ಚೇತನ ಮಾಡಿ ಸೋಮಲಿಂಗೇಶ್ವರ ದೇವರ ದರ್ಶನಕ್ಕೆ ಅನೂಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಮಾತಾಗಿದೆ. ಒಟ್ಟಾರೆ ದೇವಸ್ಥಾನದ ಶಿಲೆಗಳ ಮೇಲೂ ಹಿಂದೂಗಳ ಕೆತ್ತನೆಗಳ ಶಿಲಾ ನ್ಯಾಸವಿರುವ ಕಲ್ಲುಗಳು ಕಂಡು ಬಂದಿರುವುದು ಹಿಂದು ದೇವಸ್ಥಾನ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಬಹಮನಿ ಕೋಟೆಯ ಸೋಮೇಶ್ವರ ದೇಗುಲದಲ್ಲಿ ಶಿವನ ಮೂರ್ತಿ!
Previous Articleನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಮೋಹನ್‌ಕುಮಾರ್ ನಿಧನ
Next Article ಪತಿ, ಮಾವನ ವಿರುದ್ಧ ನಟಿ ಚೈತ್ರಾ ಹಳ್ಳಿಕೇರಿ ದೂರು