ಮಂಡ್ಯ,ನ.೧29-ಬಾರ್ ಲೈಸೆನ್ಸ್ ಪಡೆಯಲು ಅಬಕಾರಿ ಜಿಲ್ಲಾಧಿಕಾರಿ, ಇನ್ಸ್‌ಪೆಕ್ಟರ್ ಕೇಸ್ ವರ್ಕರ್ ಗೆ ಲಕ್ಷಗಟ್ಟಲೆ ಲಂಚ ಕೊಡಬೇಕು ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತ ಮಂಡ್ಯದ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಕೈ ಕಾರ್ಯಕರ್ತ ಪುನೀತ್ ದೂರು ನೀಡಿ ಅಬಕಾರಿ ಡಿಸಿ ರವಿಶಂಕರ್, ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ಆಡಿಯೋ, ವಿಡಿಯೋ ಸಹಿತ ದೂರು ಸಲ್ಲಿಸಿದ್ದಾರೆ. ಸಿಎಲ್ 7 ಬಾರ್ ಲೈಸೆನ್ಸ್‌ಗೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟಿರುವುದಾಗಿ ಆರೋಪಿಸಿದ್ದಾರೆ.
ಮದ್ದೂರು ತಾಲೂಕಿನ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದೆ. ನನ್ನ ತಾಯಿ ಲಕ್ಷ್ಮಮ್ಮ ಹೆಸರಲ್ಲಿ ಬಾರ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದೆ. ಆದ್ರೆ ಲಂಚ ಕೊಡದಿದ್ದಕ್ಕೆ ಅಧಿಕಾರಿಗಳು 4 ಬಾರಿಯೂ ಅರ್ಜಿ ವಜಾ ಮಾಡಿದ್ದಾರೆ ಎಂದು ಪುನೀತ್ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಬಕಾರಿ ಡಿಸಿ ರವಿಶಂಕರ್, ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ಆಡಿಯೋ, ವಿಡಿಯೋ ಸಹಿತ ದೂರು ನೀಡಿದ್ದಾರೆ. ವಿಡಿಯೋ ಸಾಕ್ಷ್ಯದಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಬಗ್ಗೆಯೂ ಪ್ರಸ್ತಾಪವಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
Previous Articleಆರು ಸಾವಿರ ಕೋಟಿ ಲಪಟಾಯಿಸಿದ ಬಿಜೆಪಿ ನಾಯಕ.
Next Article ಟ್ರಂಪ್ ಮತ್ತು ಬೈಡೆನ್ ಎಷ್ಟು ಕುಡಿಯುತ್ತಾರೆ ಗೊತ್ತಾ?