ಬೆಂಗಳೂರು,ಡಿ.6 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸವರ್ಷದ ಭರ್ಜರಿ ತಯಾರಿ ಆರಂಭಗೊಂಡಿದೆ. ಸಂಭ್ರಮಾಚರಣೆಯ ಹೆಸರಿನಲ್ಲಿ ಹಲವು ಕಡೆ ಡ್ರಗ್ಸ್ ಪಾರ್ಟಿ ಆಯೋಜಿಸಲಾಗುತ್ತಿದೆ ಎಂಬ ಮಾಹಿತಿ ನಗರ ಪೊಲೀಸ್ ರನ್ನು ತಲುಪಿವೆ.ಈ ಮಾಹಿತಿ ಆಧರಿಸಿ ಡ್ರಗ್ಸ್ ವಿರುದ್ಧ ಸಮರ ಸಾರಿರುವ ಪೊಲೀಸರು ಎರಡು ಪ್ರತ್ಯೇಕ ಕಡೆಗಳಲ್ಲಿ ಕಾರ್ಯಾಚರಣೆ ಕೈಗೊಂಡು 7 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ . ಬಂಧಿತರಿಂದ 79.6 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಸಿಸಿಬಿ ಪೊಲೀಸರು ಕುಮಾರಸ್ವಾಮಿ ಲೇಔಟ್ ನ ಫಯಾಜ್ (28) ನಾಗರಬಾವಿಯ ಗೌತಮ್(35) ಹಾಗೂ ಜೈಲಿನಲ್ಲಿದ್ದ ಹಮೀರ್ ಖಾನ್ ಎಂಬುವರನ್ನು ಬಂಧಿಸಿ 71 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದಾರೆ
ಮತ್ತೊಂದೆಡೆ ಕೊಡಿಗೇಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿ 8.6 ಲಕ್ಷ ಮೌಲ್ಯದ , 8 ಕೆ.ಜಿ 600 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕುಮಾರಸ್ವಾಮಿ ಲೇಔಟ್‍ನ ಚಂದ್ರಾನಗರದ ಮನೆಯೊಂದರಲ್ಲಿಟ್ಟಿದ್ದ ಮಾದಕ ವಸ್ತುಗಳಾದ15.5 ಗ್ರಾಂ ಎಂಡಿಎಂಎ ಕ್ರಿಸ್ಟಲ್,520 ಗ್ರಾಂ ಹೈಡ್ರೋ ಗಾಂಜಾ ,2 ಕೆ.ಜಿ 223 ಗ್ರಾಂ ಗಾಂಜಾ,ತೂಕದ ಯಂತ್ರ, ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ವಿಚಾರಣೆಯಲ್ಲಿ ಕೇರಳ ರಾಜ್ಯದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತಗಳನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.ಇವರಿಗೆ ಜೈಲಿನಲ್ಲಿರುವ ಹಮೀರ್ ಖಾನ್ ಎಂಬಾತ ಫೋನ್ ಮುಖಾಂತರ ಮಾಹಿತಿಯನ್ನು ನೀಡುತ್ತಿದ್ದು, ಆತನು ನೀಡಿದ ಮಾಹಿತಿ ಮೇರೆಗೆ, ಆ ಸ್ಥಳಕ್ಕೆ ತೆರಳಿ ನಿಷೇಧಿತ ಮಾದಕ ವಸ್ತುಗಳನ್ನು ಪಡೆದುಕೊಂಡು ಹೆಚ್ಚಿನ ಬೆಲೆಗೆ ಫೋರ್ಟರ್ ಮೂಲಕ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆನಿಷೇಧಿತ ಮಾದಕ ವಸ್ತುಗಳನ್ನು, ಸಿಲ್ವರ್ ಜ್ಯೂಬಿಲಿ ಸ್ಕೂಲ್ ರಸ್ತೆ, ಪಾಪರೆಡ್ಡಿ ಪಾಳ್ಯದಲ್ಲಿ ವಾಸವಿರುವ ಆತನ ಮನೆಯಲ್ಲಿಟ್ಟಿರುವುದಾಗಿತಿಳಿಸಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದರು.ನಾಲ್ವರು ಬಂಧನ
ಕೊಡಿಗೇಹಳ್ಳಿ ಪೊಲೀಸರು ಕೊಡಿಗೇಹಳ್ಳಿಯ ಅಜಿತ್,ಯಶವಂತಪುರದ ಕಾರ್ತಿಕ್ ಕುಮಾರ್, ರಾಖೇಶ್ ನಾಯ್ಕ್ ಹಾಗೂ ಕಾರ್ತಿಕ್ ನನ್ನು ಬಂಧಿಸಿ 8.6 ಲಕ್ಷ ಮೌಲ್ಯದ 8 ಕೆ.ಜಿ 600 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಆಟೋ ವಶಪಡಿಸಿಕೊಂಡಿದ್ದಾರೆ.
ಕಳೆದ ಡಿ.3 ರಂದು ಕೊಡಿಗೇಹಳ್ಳಿಯ ಟಾಟಾ ನಗರ ಎನ್ ಟಿ ಐಗೌಂಡ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಕೊಡಿಗೇಹಳ್ಳಿ ದಾಳಿ ಮಾಡಿ, ನಾಲ್ವರನ್ನು ಬಂಧಿಸಲಾಗಿದೆ.ಆರೋಪಿಗಳಿಗೆ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಪತ್ತೆಕಾರ್ಯ ಮುಂದುವರೆದಿದೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.