ಬೆಂಗಳೂರು,ಫೆ.3-
ರಾಜಧಾನಿ ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧ ವಿಧಿಸಲಾಗಿದೆ
ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನಲೆಯಲ್ಲಿ ನಗರದ ಸಂಚಾರ ಪೊಲೀಸರು ಕಬ್ಬನ್ ರಸ್ತೆಯಲ್ಲಿ ಒಂದು ತಿಂಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬನ್ ರಸ್ತೆಯ ಮುಖ್ಯ ಗಾರ್ಡ್ ಕ್ರಾಸ್ ರಸ್ತೆಯಿಂದ ಡಿಸ್ಪೆನ್ಸರಿ ರಸ್ತೆಯವರೆಗೆ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ಮಾಡುತ್ತಿದೆ
ಈ ಕಾಮಗಾರಿ ಗಮನದಲ್ಲಿಟ್ಟುಕೊಂಡು ಮುಂದಿನ 30 ದಿನಗಳವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸಂಚಾರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಈ ಆದೇಶ ಹೊರಡಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಿರ್ಬಂಧಿತ ರಸ್ತೆಗಳು:
ಸಫೀನಾ ಪ್ಲಾಜಾ ಜಂಕ್ಷನ್‌ನಿಂದ ಇನ್‌ಫೆಂಟ್ರಿ ರಸ್ತೆ ಮೂಲಕ ಕಮರ್ಷಿಯಲ್ ಸ್ಟ್ರೀಟ್ ವರೆಗೆ,
ಸಫೀನಾ ಪ್ಲಾಜಾ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಮುಖ್ಯ ಗಾರ್ಡ್ ಕ್ರಾಸ್ ರಸ್ತೆ ಮೂಲಕ ಕಮರ್ಷಿಯಲ್ ಸ್ಟ್ರೀಟ್‌ಗೆ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
ಇನ್‌ಫೆಂಟ್ರಿ ರಸ್ತೆ ಸಫೀನಾ ಪ್ಲಾಜಾದಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಇನ್‌ಫೆಂಟ್ರಿ ರಸ್ತೆ ಮತ್ತು ಲೇಡಿ ಕರ್ಜನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ಲೇಡಿ ಕರ್ಜನ್ ರಸ್ತೆಯಲ್ಲಿ ಎಡ ತಿರುವು ಪಡೆದು, ಕಬ್ಬನ್ ರಸ್ತೆ ಮತ್ತು ಕೆಆರ್ ರಸ್ತೆ ಮತ್ತು ಕಬ್ಬನ್ ರಸ್ತೆಯ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮುಂದೆ ಸಾಗಬಹುದು. ನಂತರ ಕಾಮರಾಜ ರಸ್ತೆಯಲ್ಲಿ ಎಡ ತಿರುವು ಪಡೆದು ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಸಾಗಬಹುದು.
ಕಬ್ಬನ್ ಮುಖ್ಯ ಗಾರ್ಡ್ ಕ್ರಾಸ್ ರಸ್ತೆ ಸಫೀನಾ ಪ್ಲಾಜಾ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಕಬ್ಬನ್ ರಸ್ತೆಯ ಮೂಲಕ ಸಾಗಬಹುದು. ಕೆಆರ್ ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕಾಮರಾಜ ರಸ್ತೆ ಮೂಲಕ ಕಮರ್ಷಿಯಲ್ ಸ್ಟ್ರೀಟ್‌ಗೆ ಹೋಗಬಹುದು
Previous Articleಬಡ್ಡಿ ಹಾಕಿದರೆ 10 ವರ್ಷ ಜೈಲು.
Next Article ಬಿಜೆಪಿ ಅಧ್ಯಕ್ಷ ಹುದ್ದೆ ಬಗ್ಗೆ ವಿಜಯೇಂದ್ರ ಹೇಳಿದ್ದೇನು.