ಡೆಹ್ರಾಡೂನ್: ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಸೋಮವಾರ ಯಾತ್ರೆ ಕೈಗೊಂಡಿದ್ದ ಭಕ್ತರು ಗೌರಿಕುಂಡ್ ಮತ್ತು ಕೇದಾರನಾಥ ಮಧ್ಯೆ ವಿವಿಧೆಡೆ ಶಿಬಿರಗಳಲ್ಲಿ ತಂಗಿದ್ದಾರೆ ಎಂದು ವರದಿಯಾಗಿದೆ.
ಪ್ರತಿಕೂಲ ಹವಾಮಾನ ತಿಳಿಯಾಗುವವರೆಗೂ ದೇಗುಲದತ್ತ ಸಂಚರಿಸದೆ ಶಿಬಿರಗಳಲ್ಲಿಯೇ ತಂಗುವಂತೆ ಭಕ್ತರಿಗೆ ರುದ್ರಪ್ರಯಾಗ ಜಿಲ್ಲಾಡಳಿತ ಸೂಚನೆ ನೀಡಿದೆ.
2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ್ದ ಭೀಕರ ದುರಂತವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಸೋಮವಾರ ದರ್ಶನ ಪಡೆದ ಭಕ್ತರನ್ನು ಕೇದಾರನಾಥದಲ್ಲೇ ಉಳಿಸಿಕೊಳ್ಳಲಾಗಿದೆ. ಗೌರಿಕುಂಡದಿಂದ ಪ್ರಯಾಣ ಆರಂಭಿಸಬೇಕಿದ್ದವರಿಗೆ ಅಲ್ಲಿಯೇ ಇರುವಂತೆ ಸೂಚಿಸಲಾಗಿದೆ.
Previous Articleಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಹೃದಯಾಘಾತ..!
Next Article ಲಕ್ಷ್ಮೀ ಮಿತ್ತಲ್ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ