ಬೆಂಗಳೂರು,ಜು.6- ಆಡಳಿತ ಯಂತ್ರದ ಮೇಲೆ ಬಿಗಿ ಹಿಡಿತ ಸಾಧಿಸಬೇಕು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ಜೊತೆ ಮಾತನಾಡುವಾಗ ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ.
ಸಚಿವರೊಬ್ಬರು ವರ್ಗಾವಣೆಗೆ ಸಂಬಂಧಪಟ್ಟಂತೆ ಮಾತನಾಡಿರುವ ಆಡಿಯೋ ಕ್ಲಿಪ್‍ನ್ನೊಳಗೊಂಡ ಪೆನ್‍ಡ್ರೈವ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರದರ್ಶಿಸುತ್ತಿದ ಬೆನ್ನಲ್ಲೇ ಉಪಹಾರದ ವೇಳೆ ಮತ್ತು ಮಧ್ಯಾಹ್ನ ಭೋಜನದ ಸಮಯದಲ್ಲಿ ಪ್ರತ್ಯೇಕವಾಗಿ ಕೆಲವು ಸಚಿವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾವು ಯಾರೊಂದಿಗೆ ಮಾತನಾಡುತ್ತಿದ್ದೇವೆ ಯಾವ ವಿಷಯದ ಕುರಿತು ಚರ್ಚಿಸಲಾಗುತ್ತಿದೆ ತಮ್ಮ ಮುಂದಿನ ವ್ಯಕ್ತಿ ಎಷ್ಟರಮಟ್ಟಿಗೆ ನಂಬಿಕೆಗೆ ಅರ್ಹ ಎಂಬುದನ್ನು ಖಚಿತ ಪಡಿಸಿಕೊಂಡು ಮಾತನಾಡಬೇಕು ಎಲ್ಲರ ಮುಂದೆ ತೋಚಿದಂತೆ ಮಾತನಾಡಬಾರದು ಎಂದು ಕಿವಿ ಮಾತು ಹೇಳಿರುವುದಾಗಿ ತಿಳಿದು ಬಂದಿದೆ.
ಹೊಸದಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ವಿವಿಧ ಇಲಾಖೆಗಳ ಕಾಮಗಾರಿಗಳ ಗುತ್ತಿಗೆ ಮತ್ತು ವರ್ಗಾವಣೆ ಪ್ರಕ್ರಿಯೆಗಳು ಚಾಲನೆಯಲ್ಲಿವೆ.ಈ ಹಂತದಲ್ಲಿ ಪ್ರತಿಯೊಬ್ಬ ಸಚಿವರ ಮನೆ ಮತ್ತು ಕಚೇರಿ ಬಳಿ ಸಾವಿರಾರು ಮಂದಿ ಜಮಾವಣೆಗೊಂಡು ಲಾಬಿ ನಡೆಸುತ್ತಿದ್ದಾರೆ. ಪ್ರತಿಯೊಬ್ಬರ ಬಳಿಯೂ ಸಚಿವರು ನೇರವಾಗಿ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ.ಹೀಗಾಗಿ ಮಧ್ಯವರ್ತಿಗಳು ತಲೆ ಎತ್ತಿದ್ದಾರೆ. ಕೆಲವು ಸಚಿವರು ತಮ್ಮ ಆಪ್ತರು, ಸಂಬಂಧಿಕರು, ಸ್ನೇಹಿತರನ್ನು ಮುಂದಿಟ್ಟುಕೊಂಡು ವರ್ಗಾವಣೆ ವ್ಯವಹಾರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂಬ ವರದಿಗಳಿವೆ
ಈ ವಿಚಾರದಲ್ಲಿ ಸಾಕಷ್ಟು ಮಂದಿ ನಿರ್ಭೀಡೆಯಿಂದ ಆರ್ಥಿಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಸಿರುವುದು ವ್ಯವಹಾರ ಕುದುರಿಸಿರುವುದು ಕಂಡುಬರುತ್ತಿದೆ. ಸಚಿವರು ಅಧಿಕಾರಿಗಳ ಜೊತೆಗೆ ಇರುವ ಪರಿಚಯದ ನಂಟನ್ನೇ ಬಳಸಿಕೊಂಡು ವರ್ಗಾವಣೆಯಲ್ಲಿ ಹಣ ಮಾಡುವ ದಂಧೆಗಿಳಿದಿದ್ದಾರೆ.ಈ ಹಂತದಲ್ಲಿ ಸಚಿವರಿಗೂ ಆ ವ್ಯವಹಾರದ ಮಾತುಕತೆಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮಾತುಕತೆಯ ನಡುವೆ ಸಚಿವರ, ಪ್ರಮುಖರ, ಅಕಾರಿಗಳ ಹೆಸರಿನ ಉಲ್ಲೇಖಗಳು ಕಂಡುಬರುತ್ತಿವೆ.ಇದು ನಿಧಾನವಾಗಿ ಬೆಳಕಿಗೆ ಬಂದಿದ್ದು ಇಂದಿನ ದಿನಗಳಲ್ಲಿ ಸಾಮಾಜಿಕವಾಗಿ ವೈರಲ್ ಆಗಿ ಸರ್ಕಾರಕ್ಕೆ ಮುಜುಗರವುಂಟು ಮಾಡುವ ಸಾಧ್ಯತೆ ಇದೆ.ಹೀಗಾಗಿ ಪ್ರತಿಯೊಬ್ಬ ಸಚಿವರೂ ವರ್ಗಾವಣೆ ಮತ್ತು ಗುತ್ತಿಗೆದಾರರ ವಿಷಯದಲ್ಲಿ ಎಚ್ಚರಿಕೆಯಿಂದಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
Previous ArticleCongressನವರಿಗೆ ಏನಾಗಿದೆ?
Next Article ಅಕ್ಕಿ ಬದಲಿಗೆ ಹಣ – ಹಿಂದೆ ಇದೆ ದೊಡ್ಡ ರಹಸ್ಯ
1 ಟಿಪ್ಪಣಿ
Релокация в Испанию Релокация в Испанию .