Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮನುಷ್ಯರು ಹೀಗೂ ಮಾಡ್ತಾರಾ?
    ಸುದ್ದಿ

    ಮನುಷ್ಯರು ಹೀಗೂ ಮಾಡ್ತಾರಾ?

    vartha chakraBy vartha chakraಅಕ್ಟೋಬರ್ 16, 2022ಯಾವುದೇ ಟಿಪ್ಪಣಿಗಳಿಲ್ಲ3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಪಟ್ಟನಂತಿಟ್ಟ,ಕೇರಳ – ನಿಧಿಯಾಸೆಗೆ ಬಿದ್ದು ಇಬ್ಬರು ಮಹಿಳೆಯರನ್ನು ಬಲಿಕೊಟ್ಟ ದುರ್ಮಾರ್ಗಿಗಳು ನಡೆಸಿದ ಪಾತಕ ಕೃತ್ಯಗಳು ತನಿಖೆಯಲ್ಲಿ ಬಹಿರಂಗಗೊಳ್ಳುತ್ತಿದ್ದು,
    ಕೇಳುಗರ ಎದೆ ಝಲ್ಲೆನಿಸುತ್ತಿವೆ.
    ಅವುಗಳಲ್ಲಿ ಮಾನವ ಶವದ ಮಾಂಸವನ್ನು ತಿಂದಿರುವುದು ಸಹ ಒಂದದಾರೆ ಮಹಿಳೆಯರನ್ನು ಹತ್ಯೆ ಮಾಡುವ ಮುನ್ನ ಹಾಗೂ ಹತ್ಯೆಯ ನಂತರ ಅವರ ನಡವಳಿಕೆ ಕಂಡು ತನಿಖಾ ತಂಡ ಬೆಚ್ಚಿ ಬಿದ್ದಿದೆ.
    ಮಹಿಳೆಯರನ್ನು ಬಲಿಕೊಟ್ಟ ನಂತರ ದೇಹವನ್ನು ತುಂಡು- ತುಂಡುಗಳಾಗಿ ಕತ್ತರಿಸಿ ಬೇಯಿಸಿ ತಿಂದಿದ್ದಾರೆ ಅಲ್ಲದೆ ಆರೋಪಿಗಳು ತಮ್ಮ ಮನೆಯ ಫ್ರಿಡ್ಜ್ನಲ್ಲಿ ಮಾನವ ಶವದ ಮಾಂಸ ಇಟ್ಟಿದ್ದರು ಎಂಬ ಕುರುಹು ಸಿಕ್ಕಿದೆ. ಸುಮಾರು 10 ಕೆಜಿ ಮಾನವ ಶವದ ಮಾಂಸವನ್ನು ಆರೋಪಿಗಳನ್ನು ಫ್ರಿಡ್ಜ್ನಲ್ಲಿ ಇಟ್ಟಿದ್ದರು ಇದರಲ್ಲಿ ಮಹಿಳೆಯರ ದೇಹದ ಕೆಲವು ಭಾಗಗಳು ಮತ್ತು ಒಳ ಅಂಗಾಂಗಳನ್ನು ಫ್ರಿಡ್ಜ್ನಲ್ಲಿ ಇಡಲಾಗಿತ್ತು ಮಾಂಸವನ್ನು ಫ್ರೆಜರ್ ಕುಕ್ಕರ್ನಲ್ಲಿ ಬೇಯಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
    ಕೊಲೆಯನ್ನು ಯಾವ ರೀತಿ ಮಾಡಲಾಯಿತು ಎಂದು ಪೊಲೀಸರು ಆರೋಪಿಗಳ ಕರೆದೊಯ್ದು ನಡೆಸಿದ ಡಮ್ಮಿ ಪರೀಕ್ಷೆಯ ವೇಳೆ ಎಲ್ಲವನ್ನು ವಿವರಿಸಿದ್ದಾರೆ. ಸಾಕ್ಷ್ಯ ಸಂಗ್ರಹದ ವೇಳೆ ಪ್ರಮುಖ ಆರೋಪಿ ಶಫಿ ಯಾವುದೇ ಪಶ್ಚಾತ್ತಾಪ ಪಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
    ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆಯ ಹತ್ಯೆ ಜೂನ್ನಲ್ಲಿಯೇ ನಡೆದಿದ್ದರೆ, ಮತ್ತೊಬ್ಬಳ ಕೊಲೆ ಇತ್ತೀಚೆಗೆ ನಡೆದಿದೆ. ಆದರೆ ಇಬ್ಬರ ಹತ್ಯೆಯೂ ಒಂದೇ ಮಾದರಿಯಲ್ಲಿ ನಡೆದಿದೆ. ಮಹಿಳೆಯರ ಇಬ್ಬರ ದೇಹವನ್ನು ಕತ್ತರಿಸಿ, ತುಂಡರಿಸಲಾಗಿದೆ
    ಕೇರಳದಲ್ಲಿ ಭಗವಾಲ್-ಲೈಲಾ ದಂಪತಿ ತಮ್ಮ ಹಣಕಾಸು ಪರಿಸ್ಥಿತಿ ಸುಧಾರಣೆಯಾಗಬೇಕು, ತಾವು ದೊಡ್ಡ ಶ್ರೀಮಂತರಾಬೇಕು ಎಂಬ ಕಾರಣಕ್ಕೆ, ರಶೀದ್ ಅಲಿಯಾಸ್ ಮೊಹಮ್ಮದ್ ಶಫಿ ಎಂಬಾತನ ಮಾತು ಕೇಳಿ, ಪದ್ಮಾ ಮತ್ತು ರೋಸ್ಲಿನ್ ಎಂಬ ಮಹಿಳೆಯರನ್ನು ಮಾಟ-ಮಂತ್ರಕ್ಕೆ ಬಲಿಕೊಟ್ಟ ಘಟನೆ ಬೆಚ್ಚಿ ಬೀಳಿಸಿದೆ.
    ವಾಮಾಚಾರಕ್ಕೆ ಬಲಿಯಾದ ಮಹಿಳೆಯರಿಬ್ಬರನ್ನು ಪದ್ಮಾ ಮತ್ತು ರೋಸ್ಲಿ ಎಂದು ಗುರುತಿಸಲಾಗಿದೆ. ದಿಢೀರ್ ಶ್ರೀಮಂತರಾಗುವ ದುರಾಸೆಯಿಂದ ಪ್ರಮುಖ ಆರೋಪಿ ಶಫಿ ಜೊತೆ ಸೇರಿಕೊಂಡು ಆರೋಪಿ ದಂಪತಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ದುಷ್ಕೃತ್ಯ ಎಸಗಿದ್ದಾರೆ.
    ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಲಾಗಿದೆ, ಇನ್ನೊಬ್ಬಾಕೆಯ ದೇಹ 5 ಭಾಗಗಳಾಗಿವೆ. ದೇಹದ ತುಂಡುಗಳನ್ನು ಇಟ್ಟ ಚೀಲದ ಮೇಲೆಲ್ಲ ಕುಂಕುಮ ಇತ್ತು. ಸದ್ಯ ತುಂಡಾದ ದೇಹಗಳನ್ನಷ್ಟೇ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಪದ್ಮಾ ದೇಹ ಯಾವುದು, ರೋಸ್ಲಿನ್ ದೇಹ ಯಾವುದೆಂದು ಇನ್ನೂ ಗೊತ್ತಾಗಿಲ್ಲ
    ಈ ನರಬಲಿಯ ಮಾಸ್ಟರ್ಮೈಂಡ್ ಮೊಹಮ್ಮದ್ ಶಫಿ ಅಲಿಯಾಸ್ ರಶೀದ್ ಎನ್ನಲಾಗಿದೆ ಈತನ ವಿರುದ್ಧ ಅತ್ಯಾಚಾರ, ಕೊಲೆಯತ್ನದಂತಹ ಹಲವು ಗಂಭೀರ ಪ್ರಕರಣಗಳಿದ್ದು,ಹಲವು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದರೆ,ಕೆಲವು ವಿಚಾರಣೆ ಹಂತದಲ್ಲಿವೆ.
    ಇಂತಹ ರಶೀದ್ ತಕ್ಷಣ ಹಣ ಮಾಡುವ ಆಸೆಗೆ ಬಿದ್ದು ಮಂತ್ರವಾದಿಯ ಸೋಗು ಹಾಕಿಕೊಂಡಿದ್ದ. ಶ್ರೀದೇವಿ ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ರಚಿಸಿಕೊಂಡಿದ್ದ. ಭಗವಾಲ್ ಸಿಂಗ್ ಮತ್ತು ಲೈಲಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಅವರನ್ನು ಶ್ರೀದೇವಿ ಹೆಸರಲ್ಲಿ ಗೆಳೆಯನನ್ನಾಗಿ ಮಾಡಿಕೊಂಡಿದ್ದ. ಈ ಸ್ನೇಹ ಗಟ್ಟಿಯಾಗಿ ಮೆಸೆಂಜರ್ನಲ್ಲಿ ಮಾತುಕತೆಯೂ ಜೋರಾಗಿ ನಡೆದಿತ್ತು. ಒಂದು ದಿನ ಶ್ರೀದೇವಿ ಹೆಸರಿನ ರಶೀದ್, ‘ನೀವು ಹಣ ಮಾಡಬೇಕು, ತಕ್ಷಣಕ್ಕೇ ಶ್ರೀಮಂತರಾಗಬೇಕು ಎಂದರೆ ನರಬಲಿ ಕೊಡಬೇಕು. ಅದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆಯನ್ನೂ ನಾನು ಮಾಡುತ್ತೇನೆ. ನನಗೊಬ್ಬ ಮಂತ್ರವಾದಿಯೂ ಗೊತ್ತಿದೆ’ ಎಂದು ಭಗವಾಲ್ ಸಿಂಗ್ ಗೆ ಹೇಳಿದ್ದ. ಭಗವಾಲ್ ಸಿಂಗ್ ಈ ಬಗ್ಗೆ ತನ್ನ ಪತ್ನಿಗೆ ಹೇಳಿದಾಗ ಆಕೆಗೂ ಆಸೆ ಚಿಗುರಿತು. ಇಬ್ಬರೂ ಹೀಗೊಂದು ಮಾಟಮಂತ್ರ-ನರಬಲಿಗೆ ಸಿದ್ಧರಾಗೇಬಿಟ್ಟಿದ್ದರು.
    ಭಗವಾಲ್ ಸಿಂಗ್ ಒಪ್ಪಿಗೆ ಕೊಟ್ಟ ನಂತರ ಶ್ರೀದೇವಿ (ರಶೀದ್) ಒಬ್ಬ ಮಂತ್ರವಾದಿಯನ್ನು ಪರಿಚಯಿಸಿದ್ದ. ಅಂದರೆ ಮುಖತಃ ಅಲ್ಲ, ಆತನ ವಿಳಾಸ/ ಫೋನ್ ನಂಬರ್ ಕೊಟ್ಟಿದ್ದ.
    ಹೀಗೆ ಪರಿಚಯಿಸಲ್ಪಟ್ಟ ಮಂತ್ರವಾದಿ ಮತ್ಯಾರೂ ಆಗಿರಲಿಲ್ಲ, ಅದೇ ‘ರಶೀದ್’ ಆಗಿದ್ದ..!. ಫೇಸ್ಬುಕ್ನಲ್ಲಿ ಶ್ರೀದೇವಿಯಾಗಿ ಭಗವಾಲ್ ಸಿಂಗ್ನನ್ನು ಬುಟ್ಟಿಗೆ ಹಾಕಿಕೊಂಡು, ಅವನನ್ನು ನಂಬಿಸಿದ ರಶೀದ್ ಕೊನೆಗೆ ಮಾಟಗಾರನಾಗಿ ಭಗವಾಲ್ ಸಿಂಗ್ ದಂಪತಿ ಎದುರು ನಿಂತಿದ್ದ.
    ಅಲ್ಲಿಂದ ಶುರುವಾಗಿತ್ತು ದಂಪತಿ ಮತ್ತು ರಶೀದ್ನ ಮಾಟಮಂತ್ರದ ಅಭ್ಯಾಸಗಳು. ಲೈಲಾಳನ್ನೂ ಕೂಡ ಆತ ಲೈಂಗಿಕವಾಗಿ ಬಳಸಿಕೊಂಡಿದ್ದ. ಅದೂ ಕೂಡ ಆಕೆಯ ಗಂಡ ಭಗವಾಲ್ ಸಿಂಗ್ ಎದುರಲ್ಲೇ. ಇವೆಲ್ಲ ಮಾಟ-ಮಂತ್ರದ ಭಾಗವೇ ಆಗಿದೆ ಎಂದು ದಂಪತಿಯನ್ನು ರಶೀದ್ ನಂಬಿಸಿದ್ದ. ದಂಪತಿಯಂತೂ ರಶೀದ್ನನ್ನು ಸಂಪೂರ್ಣವಾಗಿ ನಂಬಿಬಿಟ್ಟಿದ್ದರು. ನಾವೇನಾದರೂ ಶ್ರೀಮಂತರಾದರೆ, ನಮ್ಮ ಅದೃಷ್ಟ ಬದಲಾದರೆ ನೀವು ಕೇಳಿದ್ದನ್ನು ಕೊಡುತ್ತೇವೆ ಎಂದು ಮಂತ್ರವಾದಿ ಸೋಗಿನ ರಶೀದ್ಗೆ ಹೇಳಿದ್ದರು. ಅವರ ನಂಬಿಕೆಯನ್ನು ಆತ ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡ

    Verbattle
    Verbattle
    Verbattle
    ಕೊಲೆ ಫೇಸ್ಬುಕ್
    Share. Facebook Twitter Pinterest LinkedIn Tumblr Email WhatsApp
    Previous Articleರಸ್ತೆಯಲ್ಲಿ ಯಮನ ಅಟ್ಟಹಾಸ!
    Next Article AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ
    vartha chakra
    • Website

    Related Posts

    ಜೋರಾಗಿ ಕೆಮ್ಮೋದು ತಪ್ಪಾ..?

    ಫೆಬ್ರವರಿ 11, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    ಫೆಬ್ರವರಿ 11, 2026

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಫೆಬ್ರವರಿ 10, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಜೋರಾಗಿ ಕೆಮ್ಮೋದು ತಪ್ಪಾ..?

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    ಭೂಸ್ವಾಧೀನ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಗೆಲುವು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Glennhof ರಲ್ಲಿ ಹಬ್ಬಕ್ಕೆ ಬೋನಸ್ ನೀಡದ ಮಾಲೀಕನ ಕೊಂದ ನೌಕರರು
    • LinwoodGah ರಲ್ಲಿ ಆಂಧ್ರ ಮುಖ್ಯಮಂತ್ರಿ ಹೆಸರಲ್ಲಿ ವಂಚನೆ
    • Glennhof ರಲ್ಲಿ ಜನವರಿ 26ಕ್ಕೆ ಬದಲಾವಣೆ ಮುನ್ಸೂಚನೆ ನೀಡಿದ ಪರಮೇಶ್ವರ್!
    Latest Kannada News

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಫೆಬ್ರವರಿ 11, 2026

    ಜೋರಾಗಿ ಕೆಮ್ಮೋದು ತಪ್ಪಾ..?

    ಫೆಬ್ರವರಿ 11, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    ಫೆಬ್ರವರಿ 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.