ಮೈಸೂರು,ಮೇ.22-ಸಿಲಿಂಡರ್ ಸೋರಿಕೆ ಆಗಿ ಮಲಗಿರುವಾಗಲೇ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲಿಯೇ ಚಿರನಿದ್ರಗೆ ಜಾರಿದ ಆಘಾತಕಾರಿ ಘಟನೆ ಅರಮನೆ ನಗರಿಯ ಯರಗನಹಳ್ಳಿಯಲ್ಲಿ ನಡೆದಿದೆ.
ಯರಗನಹಳ್ಳಿ ನಿವಾಸಿಗಳಾದ ಕುಮಾರಸ್ವಾಮಿ (45) ಮಂಜುಳಾ (39) ದಂಪತಿ ಮತ್ತವರ ಮಕ್ಕಳಾದ ಅರ್ಚನಾ (19) ಹಾಗೂ ಸ್ವಾತಿ (17) ಮೃತಪಟ್ಟವರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಕುಟುಂಬವು ಮೈಸೂರಿನಲ್ಲಿ ನೆಲೆಸಿದ್ದರು, ಬಟ್ಟೆ ಇಸ್ತ್ರಿ ಮಾಡುವ ಕೆಲಸವನ್ನು ದಂಪತಿ ಮಾಡುತ್ತಿದ್ದರು.
ಎರಡು ದಿನಗಳ ಹಿಂದೆ ಮೇ.19 ರಂದು ಕುಟುಂಬಸ್ಥರ ಮದುವೆಗೆ ಹೋಗಿದ್ದ ಈ ಕುಟುಂಬ ಸದಸ್ಯರು ನಿನ್ನೆ ವಾಪಸ್ ಬಂದು ಮನೆಯಲ್ಲೇ ರಾತ್ರಿ ಮಲಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿಯೇ ಎಲ್ಲರೂ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಯಿಂದ ಯಾರು ಹೊರಗೆ ಬಾರದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು ಹೋಗಿ ಬಾಗಿಲು ಮುರಿದು ನೋಡಿದಾಗ ಇಡೀ ಕುಟುಂಬ ಮಲಗಿದ್ದಲ್ಲಿಯೇ ಸಾವಿನ ಮನೆ ಸೇರಿರುವುದು ಬೆಳಕಿಗೆ ಬಂದಿದೆ.
ಸಿಲಿಂಡರ್‌ನಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ, ಸಾವಿನ ಬಗ್ಗೆ ಕೆಲ ಅನುಮಾನ ಮೂಡಿದ್ದು, ಪೊಲೀಸರ ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
Previous Articleಫೋನ್ ಕದ್ದಾಲಿಕೆ ಬಗ್ಗೆ ದೂರು ಸಲ್ಲಿಸಲು ಡಿಸಿಎಂ ಸೂಚನೆ.
Next Article ಭವಾನಿ ರೇವಣ್ಣ ಕಾರು ಚಾಲಕ ನಾಪತ್ತೆ.
3 ಪ್ರತಿಕ್ರಿಯೆಗಳು
can i buy clomid without dr prescription where can i get clomiphene tablets buying clomid price can you buy generic clomid online can you buy clomid without rx can i get generic clomid for sale where to buy cheap clomiphene without prescription
The thoroughness in this break down is noteworthy.
This is the stripe of glad I enjoy reading.