ಮುಂಬೈ: ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಡಿ. ಪರಬ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಏಕಕಾಲಕ್ಕೆ ಮುಂಬೈ, ರತ್ನಗಿರಿ, ಪುಣೆಯ ಅರ್ಧ ಡಜನ್‌ಗೂ ಹೆಚ್ಚು ಸ್ಥಳಗಳನ್ನು ಇಡಿ ತಂಡಗಳು ಶೋಧಿಸುತ್ತಿವೆ. ಪರಬ್ ಅವರ ಅಧಿಕೃತ ಬಂಗಲೆ ಮೇಲೂ ದಾಳಿ ನಡೆಸಲಾಗಿದೆ.
ಪರಬ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ. ಡಿ ಈ ದಾಳಿ ನಡೆಸಿದೆ. ಪರಬ್ ಅವರು ಕೇಂದ್ರ ತನಿಖಾ ಸಂಸ್ಥೆಗಳಿಗೆ ಗುರಿಯಾದ ಮಹಾ ವಿಕಾಸ್ ಅಘಾಡಿ ಸರ್ಕಾರದ ಎರಡನೇ ಸಚಿವ.
ಫೆಬ್ರವರಿಯಲ್ಲಿ, ಸಚಿವ ನವಾಬ್ ಮಲಿಕ್ ಕೂಡ ದಾಳಿಗೆ ಒಳಗಾಗಿದ್ದರು. ಸದ್ಯ ಅವರು ಜೈಲಿನಲ್ಲಿದ್ದಾರೆ