ಬೆಂಗಳೂರು,ಮೇ.13-
ರಾಜ್ಯದಲ್ಲಿ ಲೋಕಸಭೆ ಚುನಾವಣೆಗಳು ಮುಕ್ತಾಯಗೊಂಡು ವಿಧಾನ ಪರಿಷತ್ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಪತನ ಕುರಿತಾದ ಚರ್ಚೆಗಳು ಆರಂಭಗೊಂಡಿವೆ.
ದೇಶದಲ್ಲಿ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ಸರ್ಕಾರಕ್ಕೆ ಆಪರೇಷನ್ ನಡೆಯಲಿದೆ ಮಹಾರಾಷ್ಟ್ರ ಮಾದರಿಯಲ್ಲಿ ಈ ಸರ್ಕಾರ ಪತನಗೊಳ್ಳಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭವಿಷ್ಯ ನುಡಿದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಇಂತಹ ಆಪರೇಷನ್ ನಡೆಯುವುದಿಲ್ಲ ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಆಪರೇಷನ್ ಕಮಲ ಕಾರ್ಯಕ್ರಮ ನಡೆಯುವುದಿಲ್ಲ ಅಷ್ಟೇ ಅಲ್ಲ ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರ ಕೂಡ ಅಸ್ತಿತ್ವಕ್ಕೆ ಬರುವುದಿಲ್ಲ ಹೀಗಾಗಿ ಆಪರೇಷನ್ ಕಮಲ ಎನ್ನುವುದು ಕೇವಲ ಭ್ರಮೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಮಾದರಿಯಲ್ಲಿ ಆಪರೇಷನ್ ನಡೆಸಲು ಈ ಹಿಂದೆ ಒಂದು ವರ್ಷದಿಂದ ಹಲವು ಬಾರಿ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ ನಮ್ಮ ಶಾಸಕರು ಮಹಾರಾಷ್ಟ್ರದ ಶಾಸಕರಂತೆ ಮಾರಾಟವಾಗುವುದಿಲ್ಲ ಹೀಗಾಗಿ ಆಪರೇಷನ್ ಕಮಲ ಬಿಜೆಪಿಯ ಭ್ರಮೆ ಅಷ್ಟೇ ಎಂದು ಹೇಳಿದರು.
ಆಪರೇಷನ್ ಕಮಲ:
ಮಹಾರಾಷ್ಟ್ರದ ಸತಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿರುವ ಏಕನಾಥ ಶಿಂಧೆ ಕರ್ನಾಟಕ ಸರ್ಕಾರದ ಭವಿಷ್ಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.
ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಥ್ ಆಪರೇಷನ್ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಚರ್ಚೆಗಳು ನಡೆದಿವೆ ಎಂದು ತಿಳಿಸಿದ್ದಾರೆ
ಇತ್ತೀಚೆಗೆ ತಾವು ಕರ್ನಾಟಕದ ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ. ಅಲ್ಲಿ ಪಕ್ಷದ ನಾಯಕರು ನಾಥ್ ಆಪರೇಷನ್ ಮಾಡೋದಿದೆ ಎಂದು ಹೇಳಿದರು ಆಪರೇಷನ್ ಎಂದರೆ ಏನು ಎಂದು ನಾನು ಅವರಲ್ಲಿ ಕೇಳಿದೆ. ಅವರು ಮಹಾರಾಷ್ಟ್ರದ ಮಾದರಿಯಲ್ಲೇ ಆಪರೇಷನ್ ಮಾಡಬೇಕಿದೆ.ಇದಕ್ಕೆ ನಿಮ್ಮ ಅನುಭವ ಮತ್ತು ಸಹಕಾರ ನಮಗೆ ಅಗತ್ಯ ಎಂದು . ನಾನು ಅಗತ್ಯ ಸಂದರ್ಭದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದೇನೆ ಎಂದು ಶಿಂಧೆ ತಿಳಿಸಿದ್ದಾರೆ.
Previous Articleದೂರಸಂಪರ್ಕ ಇಲಾಖೆ ಕರೆ ಎಂದರೆ ನಂಬಬೇಡಿ.!
Next Article ಮಹಾರಾಷ್ಟ್ರ ಸರ್ಕಾರ ಪತನ- ಶಿವಕುಮಾರ್ ಭವಿಷ್ಯ.