ಹುಬ್ಬಳ್ಳಿ : ಪ್ರಮೋದ್ ಮುತಾಲಿಕ್ ಒಂದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಮುಸ್ಲಿಂ ಸಮಾಜದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮುತಾಲಿಕ್ ಮಸೀದಿಗೆ ಮುತ್ತಿಗೆ ಹಾಕುತ್ತೇನೆ ಎನ್ನಲು ಈತ ಯಾರು? ಮುತಾಲಿಕ್ ಧರ್ಮ ಧರ್ಮದ ವಿರುದ್ಧ ಜಗಳ ಹಚ್ಚುತ್ತಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮರಾಜ್ಯ ಅಂದರೆ ಇದೇನಾ? ಬಡವರ ಮೇಲೆ ಗಲಾಟೆ ಮಾಡುವುದು ರಾಮ ಸೇನೆ ಕೆಲಸವಾ? ಸಂವಿಧಾನ ರಕ್ಷಣೆಗಾಗಿ ಪ್ರಮೋದ್ ಮುತಾಲಿಕ್ ನನ್ನು ಬಂಧಿಸುವಂತೆ ಜೈ ಭೀಮ್ ಸಂಘಟನೆಯಿಂದ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಮುಂಭಾಗ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Previous Articleಬಾಲಿವುಡ್ ಮಂದಿಯನ್ನು ಮನೆಗೆ ಕರೆಯಲ್ಲ ಎಂದ ಕಂಗನಾ ರಣಾವತ್
Next Article ಹಿರಿಯ ಚಿಂತಕ ಡಿ.ಎಸ್. ನಾಗಭೂಷಣ್ ಇನ್ನಿಲ್ಲ