ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2′ ಚಿತ್ರಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದೆ‘ಗೋಲ್ಡನ್ ಸ್ಟಾರ್’ ಗಣೇಶ್, ದಿಗಂತ್ ಮಂಚಾಲೆ, ಪವನ್ ಕುಮಾರ್ ಮುಂತಾದವರು ನಟಿಸಿರುವ ಈ ಸಿನಿಮಾ ಆಗಸ್ಟ್ 12ರಂದು ಬಿಡುಗಡೆ ಆಗಲಿದೆ. ಇಂದು (ಆಗಸ್ಟ್ 1) ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆ ಆಗಿದೆ . ಇದಕ್ಕೂ ಮುನ್ನ ನಾಯಕರಾದ ಗಣೇಶ್ ಹಾಗೂ ದಿಗಂತ್ ಅವರ ಕ್ಯಾರೆಕ್ಟರ್ ಇಂಟ್ರೋಡಕ್ಷನ್ ಟೀಸರ್, ಹಾಡುಗಳು ಬಿಡುಗಡೆ ಆಗಿ ಹಿಟ್ ಎನಿಸಿದೆ.“ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ “ಗಾಳಿಪಟ-2′ ನಲ್ಲಿ ಹಿರಿಯ ನಟ ಅನಂತ ನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.