ಸಿರಿಯಾ ದೇಶದಲ್ಲಿ ಬಂಡುಕೋರ ಉಗ್ರಗಾಮಿಗಳು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೆ ಅಧ್ಯಕ್ಷ ಭಾಷಾರ್ ಆಸ್ಸಾದ್ ತಮ್ಮ ಕುಟುಂಬ ಸಮೇತರಾಗಿ ರಷ್ಯಾಕ್ಕೆ ಪಲಾಯನಗೈದಿದ್ದಾರೆ. ಬಹಳ ವರ್ಷಗಳಿಂದ ರಷ್ಯಾದ ಬೆಂಬಲದೊಂದಿಗೆ ಬಂಡುಕೋರರ ವಿರುದ್ಧ ಹೋರಾಟ ಮಾಡುತ್ತಾ ತಮ್ಮ ಅಧಿಕಾರವನ್ನು ನಡೆಸುತ್ತಿದ್ದ ಅಸ್ಸಾದ್ ಈಗ ಸೋಲು ಸನ್ನಿಹಿತವಾಗುತ್ತಿರುವುದು ತಿಳಿಯುತ್ತಿದ್ದಂತೆಯೆ ತಮ್ಮ ಪತ್ನಿ ಮತ್ತು ಮೂರು ಮಕ್ಕಳೊಂದಿಗೆ ದೇಶ ಬಿಟ್ಟು ಪರಾರಿಯಾಗಿದ್ದಾರೆ. ನಿನ್ನೆಯ ದಿನ ಅವರು ವಿಮಾನದಲ್ಲಿ ಸಿರಿಯಾ ಬಿಟ್ಟು ಹೊರಟಿದ್ದು ವರದಿಯಾಗಿದೆ. ಈಗ ಅವರು ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ ಎಂದೂ ತಿಳಿದು ಬಂದಿದೆ. ರಷ್ಯಾದ ಬೆಂಬಲವಿದ್ದರೂ ದೇಶವನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲಾಗದ ಅಸ್ಸಾದ್ ಪ್ರಾಣಭಯದಿಂದ ಹೀಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.
Previous Articleಮೋದಿಯವರ ಹವ್ಯಾಸಗಳೇನು ಗೊತ್ತಾ?
Next Article 45 ಲಕ್ಷ ರೂಪಾಯಿ ಮೌಲ್ಯದ ಕುರ್ಚಿಯಲ್ಲಿ ಕುಳಿತ ಯು.ಟಿ.ಖಾದರ್.