ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎಜಿ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅಪರಾಧಿ ಪೆರಾರಿವಾಲನ್ ಮೂರು ದಶಕಗಳಿಗೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿರುವುದರಿಂದ ಬಿಡುಗಡೆ ಮಾಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಬಿ.ಆರ್.ಬವಾಯಿ ಮತ್ತು ಎ.ಎಸ್.ಬೋಪಣ್ಣ ತ್ರಿಸದಸ್ಯ ಪೀಠವು ಬುಧವಾರ ಈ ತೀರ್ಪು ನೀಡಿದೆ.
2022ರ ಮಾರ್ಚ್ 9ರಂದು ಸುಪ್ರೀಂ ಕೋರ್ಟ್ ಎಜಿ ಪೆರಾರಿವಾಲನ್‌ಗೆ ಜಾಮೀನು ನೀಡಿತ್ತು. ತಮಿಳುನಾಡು ಸರ್ಕಾರದ ಶಿಫಾರಸು ಆಧರಿಸಿ ಜೈಲಿನಿಂದ ಬಿಡುಗಡೆ ಕೋರಿ ಪೆರಾರಿವಾಲನ್ 2018ರಲ್ಲಿ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ಕಳೆದ ವಾರ ವಿಚಾರಣೆ ವೇಳೆ ಕ್ಷಮಾದಾನ ನೀಡುವ ಪ್ರಕರಣಗಳಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ವಿಶೇಷ ಅಧಿಕಾರವಿರುತ್ತದೆ ಎಂದು ವಾದಿಸಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಟೀಕೆಗೆ ಗುರಿಯಾಗಿತ್ತು.
ರಾಜೀವ್ ಗಾಂಧಿ ಹಂತಕ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
Previous Articleಲಕ್ಷ್ಯ ಸೇನ್ ಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ನಗದು ಬಹುಮಾನ
Next Article ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾರ್ದಿಕ್ ಪಟೇಲ್!