ರಾಜ್ಯಪಾಲರಿಗೆ ವಕೀಲರು ಕೊಟ್ಟ ಸಲಹೆ ಗೊತ್ತಾ.
ಬೆಂಗಳೂಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಸಲ್ಲಿಸಿರುವ ಮನವಿಯ ಬಗ್ಗೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್ ಜಾರಿಗೊಳಿಸಿದ್ದಾರೆ.
ಈ ಕುರಿತಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿರುವ ಶೋಕಾಸ್ ವಾಪಸ್ ಪಡೆಯಲು ಸಲಹೆ ಮಾಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲ ತಾವರ ಚೆಂದ್ ಗೆಹ್ಲೋಟ್ ಅವರು ಕೇಂದ್ರ ಗೃಹ ಇಲಾಖೆ ಗೆ ವರದಿ ಸಲ್ಲಿಸಿದ್ದಾರೆ ಇದರ ಬೆನ್ನಲ್ಲೇ ನಾಲ್ವರು ಹಿರಿಯ ವಕೀಲರ ಅಭಿಪ್ರಾಯ ಕೇಳಿದ್ದಾರೆ.
ರಾಜ್ಯಪಾಲರೊಂದಿಗೆ ಸಮಾಲೋಚನೆ ನಡೆಸಿದ ವಕೀಲರು ಈ ಕುರಿತಂತೆ ಇರುವ ಸುಪ್ರೀಂ ಕೋರ್ಟ್ ನ ತೀರ್ಪುಗಳು ಮತ್ತು ವಿವಿಧ ರಾಜ್ಯಗಳಲ್ಲಿನ ನಿರ್ಧಾರಗಳನ್ನು ಅವಲೋಕಸಿ ಪ್ರತ್ಯೇಕ ವರದಿಯೊಂದನ್ನು ನೀಡಿದ್ದಾರೆ ಎಂದು ಗೊತ್ತಾಗಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ಪ್ರಮುಖ ಪ್ರಕರಣಗಳು ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ್ದ ತೀರ್ಪಿನ ಉಲ್ಲೇಖಿಸಿ ತಜ್ಞರು ವರದಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
2004ರಲ್ಲಿ ಮಧ್ಯಪ್ರದೇಶದ ಇಬ್ಬರು ಸಚಿವರು ಮೇಲೆ ಭೂಕಬಳಿಕೆ ಸಂಬಂದ ದೂರು ದಾಖಲಾಗಿತ್ತು. ಇವರ ವಿರುದ್ಧ ದೂರು ದಾಖಲಿಸದಂತೆ ಸಚಿವ ಸಂಪುಟದಲ್ಲಿ ಒಂದು ಸಾಲಿನ ನಿರ್ಣಯವನ್ನೂ ಸಹ ಮಾಡಲಾಗಿತ್ತು. ಆದರೆ ಅಂದಿನ ರಾಜ್ಯಪಾಲರು ಸಂಪುಟದ ತೀರ್ಮಾನವನ್ನು ಒಪ್ಪದೆ ತಾವಾಗಿಯೇ ಅನುಮತಿ ನೀಡಿದ್ದನ್ನು ಸುಪ್ರೀಂ ಕೋರ್ಟ್ ಕೂಡಾ ಒಪ್ಪಿತ್ತು. ಆದರೆ ಈ ವೇಳೆ ಸುಪ್ರೀಂ ಕೋರ್ಟ್ ಯಾವುದೇ ಪ್ರಕರಣಗಳ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಯ ತನಿಖೆಗೆ ಆದೇಶಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಎಂಬುದನ್ನು ಸಹ ಉಲ್ಲೇಖ ಮಾಡಿತ್ತು.ಇದನ್ನು ವಕೀಲರ ತಂಡ ವಿವರಿಸಿದೆ.
ಸಂಪುಟದಲ್ಲಿ ನಿರ್ಣಯ ಅಂಗೀಕಾರವಾದರೂ ಸಹ ಆರ್ಟಿಕಲ್ 163ರಲ್ಲಿ ಉಲ್ಲೇಖವಾಗಿರುವಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರಿ ಹೊಂದಿದ್ದಾರೆ ಎಂದು ಕಾನೂನು ತಜ್ಷರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಗ್ಗೆ ರಾಜ್ಯಪಾಲರು ನೇರವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಆರ್ಟಿಕಲ್ 163ರಲ್ಲಿ ಈ ಬಗ್ಗೆ ಉಲ್ಲೇಖ ಆಗಿದೆ. ಸಂಪುಟದ ಅಭಿಪ್ರಾಯ ಕೊಟ್ಟರೆ ಅನುಮೋದನೆ ಮಾಡಲೇಬೇಕು ಎಂಬ ನಿಯಮವಿಲ್ಲ. ಅವರು ಕೌನ್ಸಿಲ್ ಮಿನಿಸ್ಟರ್ ತೀರ್ಮಾನದ ವಿರುದ್ಧವಾಗಿ ಅನುಮತಿ ನೀಡಬಹುದು ಎಂಬುದು ಕಾನೂನು ತಜ್ಞರ ವಾದವಾಗಿದೆ.
ಸಚಿವ ಸಂಪುಟ ತೀರ್ಮಾನವನ್ನು ಲೆಕ್ಕಿಸದೆ, ಪ್ರಾಸಿಕ್ಯೂಷನ್ ಗೆ ಕೊಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಅಕ್ರಮ ನಡೆದಿದೆ ಎಂಬುದು ಮನವರಿಕೆ ಆಗಿದ್ದರೆ ಕಾನೂನಿನ ಪ್ರಕಾರ ಸಂಪುಟದ ಅಭಿಪ್ರಾಯ ತೆಗೆದುಕೊಳ್ಳಬಹುದು. ಇಲ್ಲ ಸ್ವತಂತ್ರವಾಗಿ ಕೂಡ ತೀರ್ಮಾನ ಮಾಡಬಹುದು ಎಂದು ಕಾನೂನು ಹೇಳುತ್ತದೆ ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.